ದುಬೈ:ಫೈನಲ್ ಪಂದ್ಯದ ಬ್ಯಾಟಿಂಗ್‌ನಲ್ಲಿ ಆರಂಭದಲ್ಲಿಯೇ ಎಡವಿದ್ದು ದೊಡ್ಡ ಮೊತ್ತದ ಗಳಿಕೆಗೆ ಅಡ್ಡಿಯಾಯಿತು. ಅದೇ ಸೋಲಿಗೆ ಕಾರಣವಾಯಿತು ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿದರು.
ಮಂಗಳವಾರ ಐಪಿಎಲ್ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಎದುರು ಮೊದಲ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಕಸ್ ಸ್ಟೋಯಿನಿಸ್ ಔಟಾಗಿದ್ದರು. ನಂತರದ ಎರಡು ವಿಕೆಟ್‌ಗಳೂ ಬೇಗ ಪತನವಾಗಿದ್ದರು. ಶ್ರೇಯಸ್ ಮತ್ತು ರಿಷಭ್ ಪಂತ್ ತಂಡವು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡಿದ್ದರು. ಆದರೆ, ಸಾಧಾರಣ ಮೊತ್ತ ಪೇರಿಸುವಲ್ಲಿ ಮಾತ್ರ ಸಫಲವಾಗಿತ್ತು.
’ಮೂರು ವಿಕೆಟ್‌ಗಳು ಬೇಗನೆ ಹೋಗಿದ್ದರಿಂದ ನಾವು ರನ್‌ಗಳಿಕೆಯ ಜೊತೆಗೆ ವಿಕೆಟ್ ಉಳಿಸಿಕೊಂಡು ಹೋಗುವ ಒತ್ತಡವೂ ಇತ್ತು. ಆದರೂ ನಾವು ಗೌರವಾರ್ಹ ಮೊತ್ತ ಗಳಿಸಿದ್ದೆವು. 15ನೇ ಓವರ್‌ನವರೆಗೂ ರನ್‌ಗಳಿಕೆ ಸರಾಸರಿ ಚೆನ್ನಾಗಿತ್ತು. ಆದರೆ ಅದರ ನಂತರ ಇಳಿಮುಖವಾಯಿತು. ಕೊನೆಯ ಐದು ಓವರ್‌ಗಳಲ್ಲಿ ನಿರೀಕ್ಷೆಯಂತೆ ರನ್‌ಗಳು ಗಳಿಕೆಯಾಗಲಿಲ್ಲ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.