ADVERTISEMENT

ನ್ಯೂಯಾರ್ಕ್ ಫ್ರಾಂಚೈಸಿ ಖರೀದಿಸಿದ ಮುಂಬೈ ಇಂಡಿಯನ್ಸ್​

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 18:04 IST
Last Updated 20 ಮಾರ್ಚ್ 2023, 18:04 IST
   

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಮುಂಬೈ ಇಂಡಿಯನ್ಸ್, ತನ್ನ ಐದನೇ ಕ್ರಿಕೆಟ್ ಫ್ರಾಂಚೈಸಿಯಾಗಿ ‘ಎಂಐ ನ್ಯೂಯಾರ್ಕ್’ ತಂಡವನ್ನು ಖರೀದಿಸಿದೆ.

ಮುಂಬೈ ಇಂಡಿಯನ್ಸ್ ಸೋಮವಾರ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ. ಚೊಚ್ಚಲ ಆವೃತ್ತಿಯ ಮೇಜರ್‌ ಲೀಗ್‌ ಕ್ರಿಕೆಟ್‌ (ಎಂಎಲ್‌ಸಿ) ಟೂರ್ನಿಯಲ್ಲಿ ಎಂಐ ನ್ಯೂಯಾರ್ಕ್ ತಂಡ ಆಡಲಿದೆ.

ನ್ಯೂಯಾರ್ಕ್‌ ತಂಡವು ರಿಲಯನ್ಸ್ ಇಂಡಸ್ಟ್ರೀಸ್‌ ಒಡೆತನದ ಐದನೇ ತಂಡ ಆಗಿದೆ. ಮುಂಬೈ ಇಂಡಿಯನ್ಸ್ (ಐಪಿಎಲ್), ಎಂಐ ಕೇಪ್‌ಟೌನ್‌ (ದಕ್ಷಿಣ ಆಫ್ರಿಕಾ ಟಿ20), ಎಂಐ ಎಮಿರೇಟ್ಸ್ (ಐಎಲ್ ಟಿ20) ಮತ್ತು ಮುಂಬೈ ಇಂಡಿಯನ್ಸ್ (ಡಬ್ಲ್ಯುಪಿಎಲ್) ಈ ಹಿಂದಿನ ನಾಲ್ಕು ತಂಡಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.