ಹರಾರೆ: ‘ಪಂದ್ಯದ ಆಟಗಾರ’ ಮ್ಯಾಟ್ ಹೆನ್ರಿ ಅವರು ಕೊನೆಯ ಓವರಿನಲ್ಲಿ ಬರೇ 3 ರನ್ ನೀಡಿ 2 ವಿಕೆಟ್ ಪಡೆಯುವುದರೊಂದಿಗೆ ನ್ಯೂಜಿಲೆಂಡ್ ಟಿ20 ಕ್ರಿಕೆಟ್ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಶನಿವಾರ ದಕ್ಷಿಣ ಆಫ್ರಿಕಾ ತಂಡವನ್ನು3 ರನ್‌ಗಳಿಂದ ಸೋಲಿಸಿತು.
ನ್ಯೂಜಿಲೆಂಡ್ 5 ವಿಕೆಟ್‌ಗೆ 180 ರನ್ ಗಳಿಸಿತ್ತು. ಮೊತ್ತ ಬೆನ್ನತ್ತಿದ ಹರಿಣಗಳ ಪಡೆಗೆ ಗೆಲ್ಲಲು ಕೊನೆಯ ಓವರಿನಲ್ಲಿ 7 ರನ್‌ಗಳು ಬೇಕಿದ್ದವು.
ಸ್ಕೋರುಗಳು: ನ್ಯೂಜಿಲೆಂಡ್: 20 ಓವರುಗಳಲ್ಲಿ 5 ವಿಕೆಟ್‌ಗೆ 180 (ಟಿಮ್ ಸೀಫರ್ಟ್ 30, ಡೆವಾನ್ ಕಾನ್ವೆ 47, ರಚಿನ್ ರವೀಂದ್ರ 47; ಲುಂಗಿ ಗಿಡಿ 24ಕ್ಕೆ2); ದಕ್ಷಿಣ ಆಫ್ರಿಕಾ 20 ಓವರುಗಳಲ್ಲಿ 6 ವಿಕೆಟ್‌ಗೆ 177 (ಲುಹಾನ್ ಡಿ ಪ್ರಿಟೋರಿಯಸ್ 51, ರೀಝಾ ಹೆಂಡ್ರಿಕ್ಸ್ 37, ಡೆವಾಲ್ಡ್ ಬ್ರೆವಿಸ್ 31; ಮ್ಯಾಟ್ ಹೆನ್ರಿ 19ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.