ADVERTISEMENT

ಕೆಎಸ್‌ಸಿಎ ಆವರಣ ಭಣ ಭಣ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 20:30 IST
Last Updated 18 ಮಾರ್ಚ್ 2020, 20:30 IST
ಪ್ರಾತಿನಿಧಿಕ ಚಿತ್ರ (ಕೃಪೆ: ವಿಕಿಪಿಡಿಯಾ)
ಪ್ರಾತಿನಿಧಿಕ ಚಿತ್ರ (ಕೃಪೆ: ವಿಕಿಪಿಡಿಯಾ)   

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣವು ಸದಾ ಚಟುವಟಿಕೆಯಿಂದಿರುವ ತಾಣ.

ಬೆಳಗಿನ ಜಾವದಿಂದ ಸಂಜೆಯವರೆಗೆ ಹಿರಿ–ಕಿರಿಯ ಆಟಗಾರರ ತರಬೇತಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಕಚೇರಿಯ ಚಟುವಟಿಕೆಗಳು ನಡೆಯುತ್ತಿರುತ್ತವೆ. ಮುಸ್ಸಂಜೆಯಾಗುತ್ತಿದ್ದಂತೆ ಕ್ಲಬ್‌ ಹೌಸ್ ಚಟುವಟಿಕೆಗಳು ಗರಿಗೆದರು
ತ್ತಿದ್ದವು.

ಸಂಗೀತ, ಬ್ರಿಜ್‌, ಬ್ಯಾಡ್ಮಿಂಟನ್, ಈಜು, ಭೋಜನ, ಪಾನಗೋಷ್ಠಿಗಳು, ಹರಟೆ, ನಗು ಪ್ರತಿಧ್ವನಿಸುತ್ತಿದ್ದವು. ಆದರೆ ಈಗ ಇಡೀ ಸ್ಥಳದಲ್ಲಿ ನೀರವ ಮೌನ ಆವರಿಸಿದೆ. ಕೊರೊನಾ ವೈರಸ್‌ ಸೋಂಕಿನ ಭೀತಿಯಿಂದ ಎಲ್ಲ ಚಟುವಟಿಕೆಗಳಿಗೆ ಕೆಎಸ್‌ಸಿಎ ವಿರಾಮ ಹಾಕಿದೆ.

ADVERTISEMENT

ಆಡಳಿತ ಕಚೇರಿಯ ಸಿಬ್ಬಂದಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಿದೆ. ಕ್ರೀಡಾಂಗಣ ನಿರ್ವಹಣೆಯ ಕಾರ್ಮಿಕರು ಮತ್ತು ಮೇಲ್ವಿಚಾರಕರಿಗೆ ಮಾತ್ರ ಕೆಲಸಕ್ಕೆ ಬರಲು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.