ADVERTISEMENT

ಕ್ರಿಕೆಟ್ ಆನಂದಿಸುತ್ತಿದ್ದೇನೆ; ‌ನಿವೃತ್ತಿ ಸದ್ಯಕ್ಕಿಲ್ಲ: ವಿರಾಟ್ ಕೊಹ್ಲಿ

ರಾಯಿಟರ್ಸ್
Published 15 ಮಾರ್ಚ್ 2025, 14:45 IST
Last Updated 15 ಮಾರ್ಚ್ 2025, 14:45 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

– ಪಿಟಿಐ ಚಿತ್ರ

ಬೆಂಗಳೂರು: ನಾನು ಆಟವನ್ನು ಆನಂದಿಸುತ್ತಿದ್ದು, ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ ಎಂದು ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

ADVERTISEMENT

‘ಯಾರೂ ಉದ್ವೇಗಕ್ಕೊಳಗಾಗಬೇಡಿ. ನಾನು ಯಾವುದೇ (ನಿವೃತ್ತಿ) ಘೋಷಣೆ ಮಾಡಲು ಇಲ್ಲಿ ಬಂದಿಲ್ಲ. ನಾನು ಇನ್ನಷ್ಟು ಕಾಲ ಕ್ರಿಕಟ್ ಆಡುತ್ತೇನೆ. ಈ ಆಟವನ್ನು ನಾನು ಬಹಳ ಪ್ರೀತಿಸುತ್ತೇನೆ’ ಎಂದು ವಿರಾಟ್ ಕೊಹ್ಲಿ ಹೇಳಿದರು. 

ಇದರೊಂದಿಗೆ ತಮ್ಮ ನಿವೃತ್ತಿಯ ಕುರಿತು ಕೆಲಕಾಲದಿಂದ ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಎಳೆದರು. ಈಚೆಗೆ ಭಾರತ ತಂಡವು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದಾಗ ಕೊಹ್ಲಿ ನಿವೃತ್ತಿ ಘೋಷಿಸುವರು ಎಂಬ ಮಾತುಗಳು ಕೇಳಿಬಂದಿದ್ದವು. ಹೋದ ವರ್ಷ ಅಮೆರಿಕದಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಅವರು ಚುಟುಕು ಮಾದರಿಗೆ ವಿದಾಯ ಹೇಳಿದ್ದರು. 

‘ಮುಂದೆ ನಿವೃತ್ತಿ ಯಾದಾಗ ಏನು ಮಾಡುವಿರಿ ಎಂದು ಬಹಳ ಜನ ಕೇಳುತ್ತಾರೆ. ಆದರೆ ನಾನು ಏನೂ ಯೋಜಿಸಿಲ್ಲ. ನನಗೂ ಗೊತ್ತಿಲ್ಲ. ನಾನು ಯಾವಾಗಲೂ ಹೃದಯ ಹೇಳುವುದನ್ನು ಕೇಳಿದ್ದೇನೆ. ಮನಸ್ಸಿಗೆ ಸಂತೋಷವಾಗುಷ್ಟೇ ಹಣ ಗಳಿಸುತ್ತೇನೆ. ಅದಕ್ಕಾಗಿ ಮೌಲ್ಯಗಳನ್ನು ಬಿಡುವುದಿಲ್ಲ’ ಎಂದರು

‘ನಾನು ಆತ್ಮತೃಪ್ತಿಗಾಗಿ ಕ್ರಿಕೆಟ್ ಆಡುತ್ತೇನೆ. ಯಾವುದೇ ಮೈಲಿಗಲ್ಲುಗಳನ್ನು ಸಾಧಿಸುವ ಆಸೆ ಇಲ್ಲ. ನನ್ನೊಳಗೆ ಸ್ಪರ್ಧಾತ್ಮಕ ಪ್ರವೃತ್ತಿ ಇನ್ನೂ ಇದೆ. ಅದು ಜೀವಂತ ಇರುವವರೆಗೂ ನಾನು ಆಟವಾಡುತ್ತೇನೆ ಎಂದು ಹೇಳಿದ್ದಾರೆ.

‘ಶಕ್ತಿ ಮೀರಿ ಪ್ರದರ್ಶನ ನೀಡಲು ನಾನು ಬಯಸುತ್ತೇನೆ. ಈಗ ಹೆಚ್ಚಿನ ಶ್ರಮ ಬೇಕಾಗುತ್ತದೆ. 20ರ ವಯಸ್ಸಿನಲ್ಲಿ ನೀವು ಮಾಡಬಹುದಾದಷ್ಟು ಕೆಲಸಗಳನ್ನು ನಿಮ್ಮ 30ರ ವಯಸ್ಸಿನಲ್ಲಿ ಮಾಡಲು ಸಾಧ್ಯವಿಲ್ಲ. ನಾನು ವೃತ್ತಿ ಜೀವನದ ವಿಭಿನ್ನ ಹಂತದಲ್ಲಿ ಇದ್ದೇನೆ’ ಎಂದು ಹೇಳಿದ್ದಾರೆ.

ಕಳೆದ ವರ್ಷ ಟಿ–20 ವಿಶ್ವಕಪ್ ಗೆದ್ದ ಬಳಿಕ ಚುಟುಕು ಕ್ರಿಕೆಟ್‌ಗೆ ವಿರಾಟ್ ನಿವೃತ್ತಿ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.