ADVERTISEMENT

ಜವಾಹರ್‌, ಅಕೇಷನಲ್ಸ್ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 20:09 IST
Last Updated 5 ನವೆಂಬರ್ 2018, 20:09 IST

ಬೆಂಗಳೂರು: ಜವಾಹರ್ ಸ್ಪೋರ್ಟ್ಸ್ ಕ್ಲಬ್‌ ಮತ್ತು ಬೆಂಗಳೂರು ಅಕೇಷನಲ್ಸ್ ತಂಡಗಳು ಕೆಎಸ್‌ಸಿಎ 14 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇರಿಸಿದವು. ಸೋಮವಾರ ನಡೆದ ಪಂದ್ಯದಲ್ಲಿ ಜವಾಹರ್ ಸ್ಪೋರ್ಟ್ಸ್ ಕ್ಲಬ್‌ ತಂಡ ಮಲ್ಲೇಶ್ವರಂ ಜಿಮ್ಖಾನಾವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಅಕೇಷನಲ್ಸ್‌ 135 ರನ್‌ಗಳಿಂದ ವಿಜಯ ಕ್ರಿಕೆಟ್ ಕ್ಲಬ್‌ ವಿರುದ್ಧ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಮಲ್ಲೇಶ್ವರಂ ಜಿಮ್ಖಾನಾ: 37.1 ಓವರ್‌ಗಳಲ್ಲಿ 82 (ಸೂಫಿಯಾನ್‌ 12ಕ್ಕೆ4); ಜವಾಹರ್‌ ಸ್ಪೋರ್ಟ್ಸ್ ಕ್ಲಬ್‌: 15.1 ಓವರ್‌ಗಳಲ್ಲಿ 1 ವಿಕೆಟ್‌ಗೆ 86 (ಲಿಖಿತ್ ಎಸ್‌ ಅಜೇಯ 46). ಫಲಿತಾಂಶ: ಜವಾಹರ್‌ ಸ್ಪೋರ್ಟ್ಸ್ ಕ್ಲಬ್‌ಗೆ 9 ವಿಕೆಟ್‌ಗಳ ಜಯ.

ಬೆಂಗಳೂರು ಅಕೇಷನಲ್ಸ್‌: 50 ಓವರ್‌ಗಳಲ್ಲಿ 8ಕ್ಕೆ 242 (ಆರವ್ ಭಟ್ನಾಗರ್‌ 44, ರೋಹಿತ್‌ ರೋನಿತ್ ಅಕ್ತರ್‌ 43, ಆರ್ಯನ್‌ ಸಂತೋಷ್‌ 55; ಶ್ರೇಯಸ್‌ 58ಕ್ಕೆ2, ಪ್ರಾಕಾರ್‌ 32ಕ್ಕೆ2); ವಿಜಯ ಕ್ರಿಕೆಟ್ ಕ್ಲಬ್‌: 33 ಓವರ್‌ಗಳಲ್ಲಿ 107 (ಪ್ರಾಕಾರ್‌ 28; ಅರ್ಜುನ್‌ ಕುಮಾರ್‌ 21ಕ್ಕೆ2, ರೋನಿತ್ ಅಕ್ತರ್‌ 12ಕ್ಕೆ3, ಪ್ರಪಂಚನ್‌ ಕೆ 24ಕ್ಕೆ2). ಬೆಂಗಳೂರು ಅಕೇಷನಲ್ಸ್‌ಗೆ 135 ರನ್‌ಗಳ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.