ADVERTISEMENT

ಇಂಗ್ಲೆಂಡ್ ಎದುರಿನ ಟೆಸ್ಟ್‌: ಪಾಕಿಸ್ತಾನಕ್ಕೆ ಇಮಾಮ್, ಶಕೀಲ್ ಭರವಸೆ

ರಾಯಿಟರ್ಸ್
Published 11 ಡಿಸೆಂಬರ್ 2022, 15:56 IST
Last Updated 11 ಡಿಸೆಂಬರ್ 2022, 15:56 IST
ಪಾಕಿಸ್ತಾನದ ಇಮಾಮ್ ಉಲ್ ಹಕ್ ಹಾಗೂ ಸೌದ್ ಶಕೀಲ್  –ಎಪಿ/ಪಿಟಿಐ ಚಿತ್ರ
ಪಾಕಿಸ್ತಾನದ ಇಮಾಮ್ ಉಲ್ ಹಕ್ ಹಾಗೂ ಸೌದ್ ಶಕೀಲ್  –ಎಪಿ/ಪಿಟಿಐ ಚಿತ್ರ   

ಮುಲ್ತಾನ್: ಅರ್ಧಶತಕ ಗಳಿಸಿದ ಸೌದ್ ಶಕೀಲ್ ಹಾಗೂ ಇಮಾಮ್ ಉಲ್ ಹಕ್ ಅವರು ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ಪಾಕಿಸ್ತಾನಕ್ಕೆ ಗೆಲುವಿನ ಭರವಸೆ ಮೂಡಿಸಿದ್ದಾರೆ.

ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ 355 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿರುವ ಪಾಕ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 64 ಓವರ್‌ಗಳಲ್ಲಿ 4ಕ್ಕೆ 198 ರನ್ ಗಳಿಸಿದೆ. ಶಕೀಲ್ (ಬ್ಯಾಟಿಂಗ್ 54; 123 ಎಸೆತ) ಮತ್ತು ಫಹೀಮ್ ಅಶ್ರಫ್ (ಬ್ಯಾಟಿಂಗ್ 3) ಕ್ರೀಸ್‌ನಲ್ಲಿದ್ದಾರೆ.

ಮೊಹಮ್ಮದ್ ರಿಜ್ವಾನ್ ಮತ್ತು ಅಬ್ಧುಲ್ಲಾ ಶಫೀಕ್ ಮೊದಲ ವಿಕೆಟ್‌ಗೆ 66 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್ಸನ್ ಎಸೆತದಲ್ಲಿ ರಿಜ್ವಾನ್ ಕ್ಲೀನ್‌ಬೌಲ್ಡ್‌ ಆಗುವುದರೊಂದಿಗೆ ಜೊತೆಯಾಟ ಮುರಿಯಿತು. ಬಾಬರ್ ಆಜಂ ಕೇವಲ 1 ರನ್ ಗಳಿಸಿ ರಾಬಿನ್ಸನ್ ಬೌಲಿಂಗ್‌ನಲ್ಲಿ ಔಟಾದರು.

ADVERTISEMENT

ಹತ್ತು ಓವರ್‌ಗಳ ನಂತರ ಅಬ್ದುಲ್ಲಾ ಅವರೂ ಮಾರ್ಕ್‌ ವುಡ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿದ ಶಕೀಲ್ ಮತ್ತು ಇಮಾಮ್ (60; 104ಎ, 4X7) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 108 ರನ್‌ ಸೇರಿಸಿದರು. ಇದರಿಂದಾಗಿ ಆತಿಥೇಯ ತಂಡದಲ್ಲಿ ಗೆಲುವಿನ ಆಸೆ ಚಿಗುರಿದೆ.

ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿ ಇರುವುದರಿಂದ ಇದು ಅಸಾಧ್ಯವೂ ಅಲ್ಲ. ಆದರೆ ಇಂಗ್ಲೆಂಡ್ ಬೌಲರ್‌ಗಳ ದಾಳಿಯನ್ನು ಎದುರಿಸಿ ವಿಕೆಟ್ ಉಳಿಸಿಕೊಳ್ಳುವ ಸವಾಲು ಪಾಕ್ ಬ್ಯಾಟರ್‌ಗಳಿಗೆ ಇದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್ 281, ಪಾಕಿಸ್ತಾನ: 202, ಎರಡನೇ ಇನಿಂಗ್ಸ್: ಇಂಗ್ಲೆಂಡ್ 275, ಪಾಕಿಸ್ತಾನ: 64 ಓವರ್‌ಗಳಲ್ಲಿ 4ಕ್ಕೆ198 (ಅಬ್ದುಲ್ಲಾ ಶಫೀಕ್ 45, ಮೊಹಮ್ಮದ್ ರಿಜ್ವಾನ್ 30, ಸೌದ್ ಶಕೀಲ್ ಬ್ಯಾಟಿಂಗ್ 54, ಇಮಾಮ್ ಉಲ್ ಹಕ್ 60)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.