ADVERTISEMENT

17ರಿಂದ ಪಿಎಸ್‌ಎಲ್ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 13 ಮೇ 2025, 23:20 IST
Last Updated 13 ಮೇ 2025, 23:20 IST
<div class="paragraphs"><p>ಪಿಎಸ್‌ಎಲ್‌</p></div>

ಪಿಎಸ್‌ಎಲ್‌

   

ಪಿಎಸ್‌ಎಲ್‌ ವೆಬ್‌ಸೈಟ್ ಚಿತ್ರ

ಕರಾಚಿ: ಗಡಿಯಲ್ಲಿ ಘರ್ಷಣೆಯ ಕಾರಣ ಮುಂದಕ್ಕೆ ಹೋಗಿದ್ದ ಪಾಕಿಸ್ತಾನ ಟಿ20 ಕ್ರಿಕೆಟ್‌ ಲೀಗ್‌ (ಪಿಎಸ್‌ಎಲ್‌) ಶನಿವಾರ ಆರಂಭವಾಗಲಿದೆ. ಲೀಗ್‌ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್ ಅವರೂ ಮರಳಲಿದ್ದಾರೆ.

ADVERTISEMENT

ಮೇ 8ರಂದು ರಾವಲ್ಪಿಂಡಿ ಕ್ರೀಡಾಂಗಣದ ಬದಿಯ ರಸ್ತೆ ಡ್ರೋನ್ ದಾಳಿಯಿಂದ ಹಾನಿಗೀಡಾಗಿತ್ತು. ಹೀಗಾಗಿ ಉಳಿದ ಪಂದ್ಯಗಳನ್ನು  ಯುಎಇಯಲ್ಲಿ ಆಡಿಸಲು ನಿರ್ಧರಿಸಲಾಗಿತ್ತು. ನಂತರ ನಿರ್ಧಾರ ಬದಲಿಸಿ ಲೀಗ್‌ಅನ್ನು ಮುಂದಕ್ಕೆ ಹಾಕಲಾಗಿತ್ತು. ಲೀಗ್‌ನಲ್ಲಿ ಆರು ತಂಡಗಳಿವೆ.

ಮೇ 17 ರಿಂದ ಪಿಎಸ್‌ಎಲ್‌ ಆರಂಭವಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಕ್ವಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.