ADVERTISEMENT

ಅಂತಿಮ ಟೆಸ್ಟ್: ಹರಿಣಗಳ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಪಾಕ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 13:45 IST
Last Updated 20 ಅಕ್ಟೋಬರ್ 2025, 13:45 IST
<div class="paragraphs"><p>ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್</p></div>

ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್

   

(ಪಿಟಿಐ ಚಿತ್ರ)

ರಾವಲ್ಪಿಂಡಿ: ದಕ್ಷಿಣ ಆಫ್ರಿಕಾ ತಂಡದ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಪಾಕಿಸ್ತಾನ ತಂಡವು ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನವಾದ ಸೋಮವಾರ ಆಟ ಮುಗಿದಾಗ 5 ವಿಕೆಟ್‌ಗೆ 259 ರನ್‌ ಗಳಿಸಿತು.

ADVERTISEMENT

ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ ಆತಿಥೇಯರಿಗೆ, ದಕ್ಷಿಣ ಆಫ್ರಿಕಾ ಕ್ಷೇತ್ರರಕ್ಷಕರು ಐದು ಜೀವದಾನಗಳನ್ನು ನೀಡಿದರು. 71 ರನ್ ಗಳಿಸಿದ್ದಾಗ ಕೇಶವ ಮಹಾರಾಜ್ ಬೌಲಿಂಗ್‌ನಲ್ಲಿ ಜೀವದಾನ ಪಡೆದಿದ್ದ ನಾಯಕ ಶಾನ್‌ ಮಸೂದ್‌ 87 ರನ್ ಗಳಿಸಿದರು.

ಲಯಕ್ಕೆ ಮರಳಲು ಹರಸಾಹಸ ಪಡುತ್ತಿರುವ ಬಾಬರ್ ಆಜಂ 16 ರನ್ ಗಳಿಸಿದರು. ಇದರೊಂದಿಗೆ ಈ ಅನುಭವಿ ಆಟಗಾರ 29 ಟೆಸ್ಟ್‌ ಇನಿಂಗ್ಸ್‌ಗಳನ್ನು ಶತಕವಿಲ್ಲದೇ ಕಳೆದಂತಾಗಿದೆ.

38ರಲ್ಲಿ ಪದಾರ್ಪಣೆ!

ಆಸಿಫ್‌ (39 ವರ್ಷ 299 ದಿನ) ಅವರು ಪಾಕ್ ಪರ ಪದಾರ್ಪಣೆ ಮಾಡಿದ ಎರಡನೇ ಅತಿ ಹಿರಿಯ ಆಟಗಾರನಾದರು. 1955ರಲ್ಲಿ ಭಾರತ ವಿರುದ್ಧ ಚೊಚ್ಚಲ ಪಂದ್ಯ ಆಡಿದಾಗ ಮಿರಾನ್‌ ಬಕ್ಷ್‌ ಅವರ ವಯಸ್ಸು 47 ವರ್ಷ 284 ದಿನ.

ಲಾಹೋರ್‌ನಲ್ಲಿ ನಡೆದ ಮೊದಲ ಟೆಸ್ಟ್ ಗೆದ್ದ ಪಾಕಿಸ್ತಾನ 1–0 ಮುನ್ನಡೆ ಪಡೆದಿದೆ. ಇಲ್ಲಿ ವೇಗಿ ಹಸನ್ ಅಲಿ ಬದಲು ಅನುಭವಿ ಆಸಿಫ್‌ ಅಫ್ರಿದಿ ಅವಕಾಶ ಪಡೆದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಾಕಿಸ್ತಾನ: 91 ಓವರುಗಳಲ್ಲಿ 5 ವಿಕೆಟ್‌ಗೆ 259 (ಅಬ್ದುಲ್ಲಾ ಶಫೀಖ್ 57, ಶಾನ್‌ ಮಸೂದ್ 87, ಸಾದ್ ಶಕೀಲ್ ಔಟಾಗದೇ 42; ಕೇಶವ ಮಹಾರಾಜ್ 63ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.