ADVERTISEMENT

ಟಿ–20 ಕ್ರಿಕೆಟ್‌: 2021ರಲ್ಲಿ 2,000 ರನ್ ಸಿಡಿಸಿ ದಾಖಲೆ ಬರೆದ ರಿಜ್ವಾನ್

ಐಎಎನ್ಎಸ್
Published 17 ಡಿಸೆಂಬರ್ 2021, 6:37 IST
Last Updated 17 ಡಿಸೆಂಬರ್ 2021, 6:37 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ಕರಾಚಿ: ಟಿ–20 ಕ್ರಿಕೆಟ್‌ನಕ್ಯಾಲೆಂಡರ್ ವರ್ಷವೊಂದರಲ್ಲಿ 2,000 ರನ್ ಸಿಡಿಸುವ ಮೂಲಕ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಈ ದಾಖಲೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾ್ತ್ರರಾಗಿದ್ದಾರೆ.

ವೆಸ್ಟ್‌ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧ ಶತಕ(45 ಎಸೆತಗಳಲ್ಲಿ 86 ರನ್) ಸಿಡಿಸಿದ ಅವರು, ಟಿ–20 ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಕ್ರಿಸ್ ಗೇಲ್ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.

ಬಾಬರ್ ಅಜಂ (53 ಎಸೆತಗಳಲ್ಲಿ 79 ರನ್) ಜೊತೆ 158 ರನ್‌ಗಳ ಆರಂಭಿಕ ಜೊತೆಯಾಟ ನೀಡಿದ ಮೊಹಮ್ಮದ್ ರಿಜ್ವಾನ್, ಇನ್ನೂ 7 ಎಸೆತ ಬಾಕಿ ಉಳಿದಿರುವಂತೆ ಪಾಕಿಸ್ತಾನದ ಗೆಲುವಿಗೆ ಕಾರಣರಾದರು.

ADVERTISEMENT

2021ರಲ್ಲಿ18 ಅರ್ಧ ಶತಕ ಮತ್ತು ಒಂದು ಶತಕ ಸೇರಿ ಟಿ–20ಯಲ್ಲಿ ಒಟ್ಟು 2,036 ರನ್‌ಗಳನ್ನು ಅವರು ಕಲೆ ಹಾಕಿದ್ಧಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.