ರೇಸಿಂಗ್
ಚೆನ್ನೈ (ಪಿಟಿಐ): ಪೆಟ್ರೊನಾಸ್ ಟಿವಿಎಸ್ ರೇಸಿಂಗ್‌ನ ನುರಿತ ರೈಡರ್‌ಗಳಾಗಿರುವ ಋಗ್ವೇದ್ ಬರ್ಗುಜೆ, ಇಕ್ಷಣ್ ಶಾನ್‌ಬಾಗ್ ಹಾಗೂ ಡಿ. ಸಚಿನ್ ಅವರು ಪ್ರಸಕ್ತ ವರ್ಷದ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಸೂಪರ್‌ಕ್ರಾಸ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯುವರು.
ವಡೋದರಾದಲ್ಲಿ ಶುಕ್ರವಾರ ಆರಂಭವಾದ ಮೋಟಾರ್‌ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (ಎಫ್‌ಎಂಎಸ್‌ಸಿಐ) ರಾಷ್ಟ್ರೀಯ ಸೂಪರ್‌ಕ್ರಾಸ್ ಚಾಂಪಿಯನ್‌ಷಿಪ್‌ನ ಎರಡು ದಿನಗಳ ಫೆಡರೇಷನ್‌ನಲ್ಲಿ ಭಾಗವಸಹಿಸಿದ್ದ ಟಿವಿಎಸ್ ಅಧಿಕಾರಿಗಳು ಈ ವಿಷಯ ತಿಳಿಸಿದರು.
ಪೆಟ್ರೊನಾಸ್ ಟಿವಿಎಸ್ ರೇಸಿಂಗ್ ತಂಡದಲ್ಲಿ ಎಂಟು ರೈಡರ್‌ಗಳಿದ್ದಾರೆ. ಅದರಲ್ಲಿ ಋಗ್ವೇದ್ ಬರ್ಗುಜೆ, ಇಕ್ಷಣ್ ಶಾನಭಾಗ್, ವಿ. ಪ್ರಜ್ವಲ್ ಅವರು ಎ ವಿಭಾಗದಲ್ಲಿದ್ದಾರೆ. ಬಿ ಎಕ್ಸ್‌ಪರ್ಟ್ ವಿಭಾಗದಲ್ಲಿ ಇಮ್ರಾನ್ ಪಾಶಾ, ಬಂಟೀಲಾಂಗ್ ಜೈರ್ವಾ ಮತ್ತು ಡಿ. ಸಚಿನ್ ಇದ್ದಾರೆ. ನೊವೈಸ್ ಸಮೂಹವನ್ನು ಜೈಡನ್ ವಾಂಡೆಮ್ ನಾಂಗಕಲ್ವಾ ಮತ್ತು ಶೈಲೇಶ್ ಕುಮಾರ್ ಅವರು ಮುನ್ನಡೆಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.