ADVERTISEMENT

ಸ್ತನ ಕ್ಯಾನ್ಸರ್‌ಗೆ ಮಿಡಿದ ಕೊಹ್ಲಿ ಮನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 19:47 IST
Last Updated 3 ಜನವರಿ 2019, 19:47 IST
ವಿರಾಟ್ ಕೊಹ್ಲಿ ಅವರ ಕೈ ಗವಸು, ಬ್ಯಾಟಿನ ಹಿಡಿ ಮತ್ತು ಬ್ಯಾಟಿನಲ್ಲಿರುವ ಜಾಹೀರಾತು ಸ್ಟಿಕ್ಕರ್‌ನಲ್ಲಿ ಗುಲಾಬಿ ಬಣ್ಣ ಮೇಳೈಸಿತು
ವಿರಾಟ್ ಕೊಹ್ಲಿ ಅವರ ಕೈ ಗವಸು, ಬ್ಯಾಟಿನ ಹಿಡಿ ಮತ್ತು ಬ್ಯಾಟಿನಲ್ಲಿರುವ ಜಾಹೀರಾತು ಸ್ಟಿಕ್ಕರ್‌ನಲ್ಲಿ ಗುಲಾಬಿ ಬಣ್ಣ ಮೇಳೈಸಿತು   

ಸಿಡ್ನಿ: ಪಂದ್ಯದ ಮೊದಲ ದಿನ ಕೊಹ್ಲಿ 23 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ಸ್ತನ ಕ್ಯಾನ್ಸರ್‌ ಬಗ್ಗೆ ಅವರು ತೋರಿದ ಕಾಳಜಿ ಪ್ರಶಂಸೆಗೆ ಒಳಗಾಯಿತು.

ಸ್ತನ ಕ್ಯಾನ್ಸರ್‌ ಪೀಡಿತರ ನೆರವಿಗಾಗಿ ಆಸ್ಟ್ರೇಲಿಯಾದ ಹಿರಿಯ ವೇಗದ ಬೌಲರ್‌ ಗ್ಲೆನ್ ಮೆಕ್‌ಗ್ರಾ ನಡೆಸುತ್ತಿರುವ ಪ್ರತಿಷ್ಠಾನಕ್ಕೆ ನೆರವು ನೀಡುವುದಕ್ಕಾಗಿ ನಾಲ್ಕನೇ ಟೆಸ್ಟ್‌ ಅನ್ನು ‘ಪಿಂಕ್‌ ಟೆಸ್ಟ್‌’ ಎಂದು ಘೋಷಿಸಲಾಗಿತ್ತು.

ಆಸ್ಟ್ರೇಲಿಯಾ ಆಟಗಾರರು ತಂಡದ ‘ಬ್ಯಾಗಿ ಗ್ರೀನ್‌’ ಕ್ಯಾಪ್ ಬದಲಿಗೆ ಗುಲಾಬಿ ಬಣ್ಣದ ಕ್ಯಾಪ್‌ ತೊಟ್ಟುಕೊಂಡು ಅಂಗಣಕ್ಕೆ ಇಳಿದಿದ್ದರು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿನ ಹಿಡಿ, ಪ್ಯಾಡ್‌, ಶೂ ಮತ್ತು ಕೈಗವಸಿನಲ್ಲಿ ಗುಲಾಬಿ ಬಣ್ಣ ಮೇಳೈಸಿತು. ಬ್ಯಾಟಿನಲ್ಲಿರುವ ಜಾಹೀರಾತಿನ ಸ್ಟಿಕ್ಕರ್‌ ಕೂಡ ಗುಲಾಬಿ ಬಣ್ಣದಲ್ಲಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.