ADVERTISEMENT

‘ಪ್ಲೇ ಆಫ್’ ಪಂದ್ಯಗಳ ಸಮಯ ಬದಲು?

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 16:45 IST
Last Updated 27 ಏಪ್ರಿಲ್ 2019, 16:45 IST
   

ನವದೆಹಲಿ (ಪಿಟಿಐ): ಈ ಸಲದ ಐ‍‍ಪಿಎಲ್‌ ‘ಪ್ಲೇ ಆಫ್‌’ ಪಂದ್ಯಗಳ ಸಮಯವನ್ನು ಬದಲಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿಂತಿಸಿದೆ.

ಮೇ 7ರಿಂದ ಪಂದ್ಯಗಳು ನಡೆಯಲಿವೆ. ಇವುಗಳನ್ನು ರಾತ್ರಿ 8ರ ಬದಲು 7.30ಕ್ಕೆ ಆರಂಭಿಸುವ ಸಾಧ್ಯತೆ ಇದೆ.

‘ಎಂಟು ಗಂಟೆಗೆ ಆರಂಭವಾಗುವ ಲೀಗ್‌ ಹಂತದ ಪಂದ್ಯಗಳ ಪೈಕಿ ಕೆಲವು ಸಾಕಷ್ಟು ತಡವಾಗಿ ಮುಗಿದಿವೆ. ಇದರಿಂದ ಅಭಿಮಾನಿಗಳಿಗೆ ಸಾಕಷ್ಟು ತೊಂದರೆಯಾಗಿದ್ದು ಟೀಕೆಗಳೂ ಕೇಳಿಬಂದಿವೆ. ಹೀಗಾಗಿ ‘ಪ್ಲೇ ಆಫ್‌’ ಪಂದ್ಯಗಳ ಸಮಯ ಬದಲಿಸುವ ಕುರಿತು ಶನಿವಾರ ನಡೆದ ಆಡಳಿತಾಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಸಂಬಂಧ ಅಧಿಕೃತ ಪ್ರಸಾರಕರ ಜೊತೆ ಮಾತುಕತೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

2018ರ ಆವೃತ್ತಿಯ ‘ಪ್ಲೇ ಆಫ್‌’ ಪಂದ್ಯಗಳನ್ನು ರಾತ್ರಿ 7ಕ್ಕೆ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.