ADVERTISEMENT

ಪಿಎಸ್‌ಎಲ್‌: 100 ಮಂದಿಗೆ ಕೊರೊನಾ ಸೋಂಕು ಪರೀಕ್ಷೆ

ಪಿಟಿಐ
Published 18 ಮಾರ್ಚ್ 2020, 18:13 IST
Last Updated 18 ಮಾರ್ಚ್ 2020, 18:13 IST
ಪಿಎಸ್‌ಎಲ್ ಪಂದ್ಯ ನಡೆಯಬೇಕಿದ್ದ ಲಾಹೋರ್ ಕ್ರೀಡಾಂಗಣಕ್ಕೆ ಯೋಧರ ಕಾವಲು
ಪಿಎಸ್‌ಎಲ್ ಪಂದ್ಯ ನಡೆಯಬೇಕಿದ್ದ ಲಾಹೋರ್ ಕ್ರೀಡಾಂಗಣಕ್ಕೆ ಯೋಧರ ಕಾವಲು   

ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಕ್ರಿಕೆಟ್ ಟೂರ್ನಿಗೆ ಸಂಬಂಧಪಟ್ಟ 100 ಮಂದಿಯನ್ನು ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.

ಕೊರೊನಾ ಭೀತಿಯಿಂದಾಗಿ ಪಾಕ್‌ ಕ್ರಿಕೆಟ್‌ ಮಂಡಳಿ ಮಂಗಳವಾರ ಪಿಎಸ್‌ಎಲ್ ಟೂರ್ನಿಯನ್ನು ಮುಂದೂಡಿತ್ತು. ಇಂಗ್ಲೆಂಡ್‌ನ ಆಟಗಾರ ಅಲೆಕ್ಸ್‌ ಹೇಲ್ಸ್ ಅವರಲ್ಲಿ ಸೋಂಕು ಲಕ್ಷಣ ಕಂಡುಬಂದಿತ್ತು ಎಂದು ಮಾಜಿ ಆಟಗಾರ ವೀಕ್ಷಕ ವಿವರಣೆಗಾರ ರಮೀಜ್‌ ರಾಜಾ ಬಹಿರಂಗಪಡಿಸಿದ್ದರು.

ಆಟಗಾರರು ಮತ್ತಿತರ ಸಿಬ್ಬಂದಿ ಸೇರಿದಂತೆ ಒಟ್ಟು ನೂರು ಮಂದಿಯಲ್ಲಿ ಸೋಂಕು ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.