ವಿರಾಟ್ ಕೊಹ್ಲಿ
– ಪಿಟಿಐ ಚಿತ್ರ
ಯುಗವೊಂದರ ಅಂತ್ಯ...
‘ಟೆಸ್ಟ್ ಕ್ರಿಕೆಟ್‌ನ ಯುಗವೊಂದು ಅಂತ್ಯಗೊಂಡಿದೆ. ಆದರೆ ಪರಂಪರೆ ಸದಾ ಮುಂದುವರಿಯಲಿದೆ! ಭಾರತದ ಮಾಜಿ ನಾಯಕ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಟೀಮ್ ಇಂಡಿಯಾಕ್ಕೆ ನಿಮ್ಮ ಕೊಡುಗೆ ಸದಾ ಮನದಾಳದಲ್ಲಿರಲಿದೆ’– ಬಿಸಿಸಿಐ, ಎಕ್ಸ್‌ನಲ್ಲಿ ಪೋಸ್ಟ್
‘ಸಿಂಹದಂಥ ಕೆಚ್ಚು ಹೊಂದಿರುವ ವ್ಯಕ್ತಿ! ಮಿಸ್ ಯೂ ಚೀಕ್ಸ್’– ಗೌತಮ್ ಗಂಭೀರ್, ಭಾರತದ ಹೆಡ್ ಕೋಚ್
‘ಭಾರತ ಮಹಾನ್ ಟೆಸ್ಟ್ ಆಟಗಾರರಲ್ಲೊಬ್ಬರು ದೀರ್ಘ ಮಾದರಿಗೆ ವಿದಾಯ ಹೇಳಿದ್ದಾರೆ. ಬಿಳಿ ಜರ್ಸಿ ತೆಗೆದಿಟ್ಟಿರಬಹದು. ಆದರೆ ಕಿರೀಟ ಮಾತ್ರ ಅಲ್ಲೇ ಉಳಿಯಲಿದೆ. ಟೆಸ್ಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಹೇಳಿದ್ದಾರೆ. ಅವರ ಪರಂಪರೆ ಹೋಲಿಕೆಗೆ ಮೀರಿದ್ದು’ಐಸಿಸಿ, ಎಕ್ಸ್‌ನಲ್ಲಿ
‘ಹೊಳಪಿನ ಟೆಸ್ಟ್ ಜೀವನಕ್ಕಾಗಿ ವಿರಾಟ್ ಕೊಹ್ಲಿಗೆ ಅಭಿನಂದನೆಗಳು. ಟಿ20 ಅಭ್ಯುದಯದ ಕಾಲದಲ್ಲಿ ಶುದ್ಧ ಮಾದರಿಯ ಕ್ರಿಕೆಟ್‌ಗೆ ಜೀವತುಂಬಿದ್ದಕ್ಕೆ, ಶಿಸ್ತು, ಫಿಟ್ನೆಸ್ ಮತ್ತು ಬದ್ಧತೆಯ ವಿಷಯದಲ್ಲಿ ಅಸಾಧಾರಣ ನಿದರ್ಶನವಾಗಿ ನಿಂತಿದ್ದಕ್ಕೆ ಧನ್ಯವಾದಗಳು. ಟೆಸ್ಟ್ ಪಂದ್ಯಗಳನ್ನು ನೀವು ಕೆಚ್ಚೆದೆಯಿಂದ ಮತ್ತು ಹೆಮ್ಮೆಯಿಂದ ಆಡಿದ್ದೀರಿ’ಜಯ್ ಶಾ, ಐಸಿಸಿ ಮುಖ್ಯಸ್ಥ
‘ಆ ನಡಿಗೆ, ಆ ಹೊಡೆತಗಳು, ಎಂಥಾ ಭಾವನೆಗಳು, ಅದೆಂಥಾ ಸಂಭ್ರಮ. ಇವೆಲ್ಲವನ್ನೂ ನಾವು ಕಳೆದುಕೊಳ್ಳಲಿದ್ದೇವೆ. ಅದ್ಭುತ ಟೆಸ್ಟ್ ಯುಗಕ್ಕೆ ತೆರೆಬಿದ್ದಿದೆ. ಆದರೆ ಪರಂಪರೆ ಜೀವಂತವಾಗಿರಲಿದೆ. ಕೆಚ್ಚು, ಧೈರ್ಯ ಮತ್ತು ಹೋಲಿಸಲಾಗದ ಬದ್ಧತೆ. ನೀವು ಈ ಮಾದರಿ ಆಡಿದ್ದೀರಷ್ಟೇ ಅಲ್ಲ, ಅದನ್ನು ಎತ್ತರಕ್ಕೇರಿಸಿದ್ದೀರಿ’– ರಾಯಲ್ ಚಾಲೆಂಜರ್ಸ್, ಬೆಂಗಳೂರು
ಟೆಸ್ಟ್ ಕ್ರಿಕೆಟ್ ನಿಮ್ಮಲ್ಲಿರುವ ಹೋರಾಟದ ಗುಣವನ್ನು ಹೊರಗೆಳೆಯಿತು. ನೀವು ಎಲ್ಲವನ್ನೂ ಕೊಟ್ಟಿದ್ದೀರಿ. ಮಹಾನ್ ಆಟಗಾರರಂತೆ ಆಡಿದ್ದೀರಿ. ಎದೆಯಲ್ಲಿ ಹಸಿವನ್ನಿಟ್ಟುಕೊಂಡು, ಪ್ರತಿ ಹೆಜ್ಜೆಯಲ್ಲೂ ಹೆಮ್ಮೆಪಟ್ಟುಕೊಳ್ಳುವಂಗತೆ ಆಡಿದ್ದೀರಿ. ಟೆಸ್ಟ್‌ನಲ್ಲಿ ನಿಮ್ಮ ಸಾಧನೆಗೆ ಹೆಮ್ಮೆಯಿದೆ. ಒಳ್ಳೆಯದಾಗಲಿ ಕಿಂಗ್ ಕೊಹ್ಲಿ– ಯುವರಾಜ್ ಸಿಂಗ್, ಮಾಜಿ ಕ್ರಿಕೆಟಿಗ.
ಟೆಸ್ಟ್ ಕ್ರಿಕೆಟ್‌ನ ಅತಿ ಹಳೆಯ ಮಾದರಿಗೆ ಎಲ್ಲವನ್ನೂ ನೀಡಿದ ಆಧುನಿಕ ಕ್ರಿಕೆಟ್ ಯುಗದ ಅತಿ ದೊಡ್ಡ ಬ್ರ್ಯಾಂಡ್. ಟೆಸ್ಟ್ ಕ್ರಿಕೆಟ್ ಇದಕ್ಕಾಗಿ ನಿಮಗೆ ಋಣಿಯಾಗಿರಲಿದೆ’–ಸಂಜಯ್ ಮಾಂಜ್ರೇಕರ್, ಮಾಜಿ ಕ್ರಿಕೆಟಿಗ
‘ನಿಮ್ಮ ನಾಯಕತ್ವದಲ್ಲೇ ನನ್ನ ಟೆಸ್ಟ್‌ಗೆ ಪದಾಪರ್ಣೆಯಿಂದ ಹಿಡಿದು, ದೇಶಕ್ಕಾಗಿ ಜೊತೆಯಾಗಿಯೇ ಹೊಸ ಎತ್ತರಕ್ಕೇರಿದೆವು. ಆಟದ ಬಗ್ಗೆ ನಿಮ್ಮ ಉತ್ಕಟ ಪ್ರೇಮ ಮತ್ತು ದಣಿವರಿಯದ ಗುಣ ಕಳೆದುಕೊಳ್ಳಲಿದ್ದೇವೆ. ಆದರೆ ನಿಮ್ಮ ಪರಂಪರೆ ಒಂದಿಷ್ಟೂ ಮಸುಕಾಗದು. ಟೆಸ್ಟ್‌ನಲ್ಲಿ ಅಸಾಧಾರಣ ಪಯಣಕ್ಕೆ ಅಭಿನಂದನೆಗಳು’–ಜಸ್‌ಪ್ರೀತ್ ಬೂಮ್ರಾ, ಭಾರತ ತಂಡದ ವೇಗಿ
‘ಅಮೋಘ ಟೆಸ್ಟ್ ಜೀವನಕ್ಕಾಗಿ ಅಭಿನಂದನೆಗಳು. ನಿಮ್ಮನ್ನು ನೋಡಿದ ದಿನದಿಂದಲೇ ನೀವು ವಿಶೇಷ ಆಟಗಾರನೆಂದು ಮನವರಿಕೆಯಾಗಿತ್ತು. ನೀವು ಟೆಸ್ಟ್ ಕ್ರಿಕೆಟ್‌ಅನ್ನು ಅನುಭವಿಸಿ ಆಡುತ್ತಿದ್ದ ತೀವ್ರತೆಯನ್ನು ನೋಡುವುದೇ ಚೆಂದ. ನೀವು ಟೆಸ್ಟ್ ಕ್ರಿಕೆಟ್‌ನ ಮಹಾನ್ ರಾಯಭಾರಿ. ಏಕದಿನ ಕ್ರಿಕೆಟ್‌ಗೆ ನಿಮಗೆ ಶುಭ ಹಾರೈಸುತ್ತೇನೆ’ವಿರೇಂದ್ರ ಸೆಹ್ವಾಗ್, ಮಾಜಿ ಆಟಗಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.