ADVERTISEMENT

ರಣಜಿ ಟ್ರೋಫಿ: ಎರಡನೇ ದಿನವೇ ಗೆದ್ದ ಸೌರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 15:53 IST
Last Updated 23 ಜನವರಿ 2026, 15:53 IST
   

ರಾಜ್‌ಕೋಟ್(ಪಿಟಿಐ): ಎರಡೇ ದಿನಗಳಲ್ಲಿ ಮುಗಿದ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಕ್ರಿಕೆಟ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವು ಪಂಜಾಬ್ ಎದುರು 194 ರನ್‌ಗಳಿಂದ ಜಯಿಸಿತು. 

ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 320 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡವು 125 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಸ್ಪಿನ್ನರ್  ಪಾರ್ಥ್ ಬೂತ್ (8ಕ್ಕೆ5) ಮತ್ತು ಧರ್ಮೇಂದ್ರ ಸಿಂಹ ಜಡೇಜ (55ಕ್ಕೆ5) ಅವರ ದಾಳಿಗೆ ಪಂಜಾಬ್ ತತ್ತರಿಸಿತು. ನಾಯಕ ಶುಭಮನ್ ಗಿಲ್ ಅವರು ಎರಡನೇ ಇನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. 

ಪಂದ್ಯದ ಮೊದಲ ದಿನ ಗುರುವಾರ ಇಲ್ಲಿ ಒಟ್ಟು 23 ವಿಕೆಟ್‌ಗಳು ಪತನವಾಗಿದ್ದವು. 33 ರನ್‌ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದ್ದ ಸೌರಾಷ್ಟ್ರ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಪ್ರೇರಕ್ ಮಂಕಡ್ (56; 41ಎ) ಅವರ ಅರ್ಧಶತಕದ ಬಲದಿಂದ 286 ರನ್ ಗಳಿಸಿತು. ಶುಕ್ರವಾರ ಒಟ್ಟು 17 ವಿಕೆಟ್‌ಗಳು ಪತನವಾದವು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.