
ಆರ್‌ಸಿಬಿ ತಂಡದ ಲೊಗೊ
ಚಿತ್ರ ಕೃಪೆ: ಎಕ್ಸ್
ಬೆಂಗಳೂರು: ಐಪಿಎಲ್ ಫ್ರ್ಯಾಂಚೈಸಿ ‘ಆರ್‌ಸಿಬಿ’ಯ ಮಾರಾಟ ಸುದ್ದಿಗೆ ಇಂಬು ನೀಡುವಂತೆ ಹೊಸ ಬೆಳವಣಿಗೆ ನಡೆದಿದೆ. ಫ್ರ್ಯಾಂಚೈಸಿ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿ. (ಯುಎಸ್‌ಎಲ್), ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ.ಲಿ.ನಲ್ಲಿ ಮಾಡಿರುವ ಹೂಡಿಕೆಗಳಿಗೆ ಸಂಬಂಧಿಸಿ ವಿವರವಾದ ಮೌಲ್ಯಮಾಪನಕ್ಕೆ ಮುಂದಾಗಿದೆ.
ಐಪಿಎಲ್‌ನಲ್ಲಿ ಪುರುಷರ ಮತ್ತು ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ತಂಡಗಳನ್ನು ಈ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ.ಲಿ. ನಿರ್ವಹಿಸುತ್ತಿದೆ.
‘ಮೌಲ್ಯಮಾಪನ ಪ್ರಕ್ರಿಯೆಯು 2026ರ ಮಾರ್ಚ್ ಅಂತ್ಯದ ಒಳಗೆ ಮುಗಿಯಲಿದೆ’ ಎಂದು ಯುಎಸ್‌ಎಲ್, ಮುಂಬೈ ಷೇರುಪೇಟೆಗೆ ಬುಧವಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದೆ.
ಮೂಲ ಉದ್ಯಮವಾದ ‘ಮದ್ಯ ಮಾರಾಟ’ದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಮುಂದಾಗಿರು ವುದಾಗಿ ಹೇಳಿದೆ. ಫ್ರ್ಯಾಂಚೈಸಿ ಮಾರಾಟದ ಬಗ್ಗೆ ಪ್ರತಿಕ್ರಿಯಿಸಲು ಆರ್‌ಸಿಬಿ ಮಾತೃಸಂಸ್ಥೆ ಡಿಯಾಜಿಯೊ ಈ ಹಿಂದೆ ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.