ADVERTISEMENT

ವಿಜಯೋತ್ಸವಕ್ಕೆ ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳಬೇಕಿತ್ತು: ದೇವಜಿತ್‌ ಸೈಕಿಯಾ

ಪಿಟಿಐ
Published 4 ಜೂನ್ 2025, 14:39 IST
Last Updated 4 ಜೂನ್ 2025, 14:39 IST
<div class="paragraphs"><p>ದೇವಜಿತ್‌ ಸೈಕಿಯಾ</p></div>

ದೇವಜಿತ್‌ ಸೈಕಿಯಾ

   

ನವದೆಹಲಿ: ‘ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಕಾಲ್ತುಳಿತದಲ್ಲಿ ಅಭಿಮಾನಿಗಳ ಸಾವು ಸಂಭವಿಸಿದ್ದು ‘ದುರದೃಷ್ಟಕರ’. ಆರ್‌ಸಿಬಿಯ ಐಪಿಎಲ್‌ ವಿಜಯೋತ್ಸವ ಕಾರ್ಯಕ್ರಮಕ್ಕೆ ಸೂಕ್ತ ರೀತಿಯಲ್ಲಿ ಯೋಜನೆ ರೂಪಿಸಿಕೊಳ್ಳಬೇಕಿತ್ತು’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಬುಧವಾರ ತಿಳಿಸಿದರು.

18 ವರ್ಷಗಳ ಕಾಯುವಿಕೆ ನಂತರ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ ಪ್ರಶಸ್ತಿ ಗೆದ್ದುಕೊಂಡ ಸಂಭ್ರಮ, ಸಂಜೆಯ ವೇಳೆಗೆ ಸೂತಕದ ಛಾಯೆ ಪಡೆದುಕೊಂಡಿತ್ತು.

ADVERTISEMENT

‘ಇಷ್ಟು ದೊಡ್ಡ ಪ್ರಮಾಣದಲ್ಲಿ ವಿಜಯೋತ್ಸವ ಹಮ್ಮಿಕೊಳ್ಳುವಾಗ ಸಾಕಷ್ಟು ಮುಂಜಾಗ್ರತೆ, ಸುರಕ್ಷತೆ, ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಎಲ್ಲೊ ಒಂದು ಕಡೆ ಲೋಪವಾಗಿವೆ’ ಎಂದರು.

‘ಈ ಹಿಂದೆಯೂ ಐಪಿಎಲ್‌ ಗೆದ್ದ ತಂಡಗಳ ಸಂಭ್ರಮಾಚರಣೆ ನಡೆದಿವೆ. ಹಿಂದಿನ ವರ್ಷ ಕೋಲ್ಕತ್ತದಲ್ಲಿ ಸಹ ಐಪಿಎಲ್‌ ವಿಜಯೋತ್ಸವ ಕಾರ್ಯಕ್ರಮ ನಡೆದಿತ್ತು. ಆದರೆ ಅಲ್ಲಿ ಏನೂ ಆಗಿರಲಿಲ್ಲ. ಬಾರ್ಬಾಡೋಸ್‌ನಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ ಗೆದ್ದಾಗ ಮುಂಬೈನ ಕಡಲಕಿನಾರೆ ಬಳಿ ಜನಸಾಗರವೇ ಹರಿದುಬಂದಿತ್ತು. ಆದರೆ ಅಹಿತಕರ ಘಟನೆಗಳೇನೂ ನಡೆದಿರಲಿಲ್ಲ’ ಎಂದು ಸೈಕಿಯಾ ಉದಾಹರಣೆ ನೀಡಿದರು.

ಮಂಗಳವಾರ ಕೂಡ ಅಹಮದಾಬಾದಿನ ಕ್ರೀಡಾಂಗಣದಲ್ಲಿ ಐಪಿಎಲ್‌ ಫೈನಲ್ ಪಂದ್ಯವನ್ನು 1,20,000 ಮಂದಿ ವೀಕ್ಷಿಸಿದ್ದರು. ಆದರೆ ಬಿಸಿಸಿಐ ಬಳಿ ಇದಕ್ಕಾಗಿಯೇ ಯೋಜಿಸಿದ ತಂಡ ಸ್ಥಳೀಯ ಜಿಲ್ಲಾಡಳಿತದೊಡನೆ ಸಮನ್ವಯ ಸಾಧಿಸಿ ಕೆಲಸ ಮಾಡಿತು. ಪ್ರೇಕ್ಷಕರಿಗೆ ಸಮಸ್ಯೆಯಾಗದಂತೆ ನೋಡಿಕೊಂಡಿತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.