ADVERTISEMENT

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಸಿದ್ಧತೆ : ಭಾರತ ತಂಡದ ಅಭ್ಯಾಸ

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಸಿದ್ಧತೆ

ಪಿಟಿಐ
Published 20 ಜೂನ್ 2022, 18:20 IST
Last Updated 20 ಜೂನ್ 2022, 18:20 IST
   

ಲೆಸ್ಟರ್‌: ಇಂಗ್ಲೆಂಡ್‌ ವಿರುದ್ಧದ ಐದನೇ ಹಾಗೂ ಕೊನೆಯ ಕ್ರಿಕೆಟ್‌ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ತಂಡದ ಆಟಗಾರರು ಲೆಸ್ಟರ್‌ಷೈರ್‌ ಕೌಂಟಿ ಮೈದಾನದಲ್ಲಿ ಸೋಮವಾರ ತಾಲೀಮು ಕೈಗೊಂಡರು.

ಇಂಗ್ಲೆಂಡ್‌ ಎದುರಿನ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 2–1 ರಲ್ಲಿ ಮುನ್ನಡೆಯಲ್ಲಿದೆ. ಈ ಸರಣಿಯ ನಾಲ್ಕು ಪಂದ್ಯಗಳು ಕಳೆದ ವರ್ಷ ನಡೆದಿತ್ತು. ಕೋವಿಡ್‌ ಕಾರಣ ಮುಂದೂಡಲಾಗಿದ್ದ ಕೊನೆಯ ಟೆಸ್ಟ್‌ ಜುಲೈ 1 ರಂದು ಬರ್ಮಿಂಗ್‌ಹ್ಯಾಂನಲ್ಲಿ ಆರಂಭವಾಗಲಿದೆ. ಆರಂಭಿಕ ಬ್ಯಾಟರ್‌ಗಳಾದ ರೋಹಿತ್‌ ಶರ್ಮ ಮತ್ತು ಶುಭಮನ್‌ ಗಿಲ್‌ ಅವರು ತುಂಬಾ ಹೊತ್ತು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಕೆ.ಎಲ್‌.ರಾಹುಲ್‌ ಅನುಪಸ್ಥಿತಿಯಲ್ಲಿ ಗಿಲ್‌ ಅವರು ರೋಹಿತ್‌ ಜತೆ ಭಾರತದ ಇನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ.

ತಂಡದ ಇತರ ಸದಸ್ಯರಾದ ವಿರಾಟ್‌ ಕೊಹ್ಲಿ, ಚೇತೇಶ್ವರ ಪೂಜಾರ, ರವೀಂದ್ರ ಜಡೇಜ, ಜಸ್‌ಪ್ರೀತ್‌ ಬೂಮ್ರಾ ಅವರೂ ದೈಹಿಕ ಕಸರತ್ತು ನಡೆಸಿದರು.

ADVERTISEMENT

ಭಾರತ ತಂಡ ಒಂದು ವಾರ ಲೆಸ್ಟರ್‌ನಲ್ಲೇ ತಂಗಲಿದ್ದು, ಜೂನ್‌ 24 ರಿಂದ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಟೆಸ್ಟ್‌ ಪಂದ್ಯದ ಬಳಿಕ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನೂ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.