ADVERTISEMENT

ಪರಿಸ್ಥಿತಿ ಅನಿವಾರ್ಯತೆಯಿಂದಾಗಿ ಏಳು ನಾಯಕರ ನೇಮಕ: ಸೌರವ್ ಗಂಗೂಲಿ

ಪಿಟಿಐ
Published 8 ಜುಲೈ 2022, 16:41 IST
Last Updated 8 ಜುಲೈ 2022, 16:41 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ಏಳು ಸರಣಿಗಳಲ್ಲಿ ಏಳು ನಾಯಕರನ್ನು ನೇಮಕ ಮಾಡಿರುವುದು ಸೂಕ್ತವಲ್ಲ ನಿಜ. ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಈ ರೀತಿ ಮಾಡಲೇಬೇಕಾಯಿತು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

ಶುಕ್ರವಾರ 50ನೇ ವಸಂತಕ್ಕೆ ಕಾಲಿರಿಸಿದ ಭಾರತ ತಂಡದ ಮಾಜಿ ನಾಯಕ ಗಂಗೂಲಿ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿದ್ದಾರೆ.

‘ಅತ್ಯಂತ ಕಡಿಮೆ ಅವಧಿಯಲ್ಲಿ ಆರೇಳು ನಾಯಕರನ್ನು ತಂಡವು ಕಂಡಿದೆ. ಇದಕ್ಕೆ ಕಾರಣಗಳಿವೆ. ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಭಾರತಕ್ಕೆ ರೋಹಿತ್ ಶರ್ಮಾ ನಾಯಕರಾಗಬೇಕಿತ್ತು. ಆದರೆ, ಗಾಯಗೊಂಡಿದ್ದರಿಂದ ಅವರು ಹಿಂದೆ ಸರಿದರು. ಅವರ ಬದಲಿಗೆ ಹೊಣೆ ನಿಭಾಯಿಸಬೇಕಿದ್ದ ಕೆ.ಎಲ್. ರಾಹುಲ್ ಕೂಡ ಗಾಯಗೊಂಡರು. ಈಚೆಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ನಾಯಕತ್ವ ವಹಿಸಲು ಸಿದ್ಧರಾಗಿದ್ದರು. ಆದರೆ, ಕೋವಿಡ್ ಖಚಿತವಾಗಿದ್ದರಿಂದ ರೋಹಿತ್ ಪ್ರತ್ಯೇಕವಾಸಕ್ಕೆ ತೆರಳಿದರು. ಬೂಮ್ರಾ ಅವರನ್ನು ನಾಯಕರನ್ನಾಗಿ ಮಾಡಲಾಯಿತು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.