ADVERTISEMENT

ಏಷ್ಯಾಕಪ್ ಟಿ20: ಬಾಂಗ್ಲಾ ತಂಡಕ್ಕೆ ಶಕೀಬ್ ನಾಯಕ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 13:31 IST
Last Updated 14 ಆಗಸ್ಟ್ 2022, 13:31 IST
ಶಕೀಬ್ ಅಲ್ ಹಸನ್
ಶಕೀಬ್ ಅಲ್ ಹಸನ್   

ಢಾಕಾ (ಪಿಟಿಐ): ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಬಾಂಗ್ಲಾದೇಶ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಇದೇ 27ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದೆ. ಭಾನುವಾರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು 17 ಆಟಗಾರರ ತಂಡವನ್ನು ಪ್ರಕಟಿಸಿದೆ.

‘ಬೆಟ್ಟಿಂಗ್ ಕಂಪೆನಿಯೊಂದಿಗೆ ಮಾಡಿಕೊಂಡಿದ್ದ ಪ್ರಚಾರ ಒಪ್ಪಂದವನ್ನು ಶಕೀಬ್ ರದ್ದುಗೊಳಿಸಿದ್ದಾರೆ. ಆದ್ದರಿಂದ ಅವರಿಗೆ ಮರಳಿ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ಅವರಿಗೆ ನಾಯಕತ್ವ ನೀಡಲಾಗಿದೆ’ ಎಂದು ಬಿಸಿಬಿ ಮೂಲಗಳು ತಿಳಿಸಿವೆ.

ADVERTISEMENT

ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಲಿಟನ್ ದಾಸ್ ಗಾಯಗೊಂಡಿದ್ದು ಅವರು ಆಡುವುದಿಲ್ಲ. 2019ರಲ್ಲಿ ಕೊನೆಯ ಬಾರಿಗೆ ಟಿ20 ಮಾದರಿಯ ಪಂದ್ಯವನ್ನು ಆಡಿದ್ದ ಶಬ್ಬೀರ್ ರೆಹಮಾನ್ ತಂಡಕ್ಕೆ ಮರಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದಿದ್ದ ಮುಷ್ಫಿಕುರ್ ರಹೀಮ್ ಕೂಡ ಸ್ಥಾನ ಪಡೆದಿರುವರು. ಬ

ತಂಡ: ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಷ್ಫಿಕುರ್ ರಹೀಮ್ ಅಫಿಫ್ ಹುಸೇನ್, ಮೊಸಾದೆಕ್ ಹುಸೇನ್, ಮೆಹಮುದುಲ್ಲಾ, ಮೆಹದಿ ಹಸನ್, ಮೊಹಮ್ಮದ್ ಸೈಫೂದ್ದೀನ್, ಹಸನ್ ಮೆಹಮುದ್, ಮುಸ್ತಫಿಜುರ್ ರೆಹಮಾನ್, ನಸುಮ್ ಅಹಮದ್, ಶಬ್ಬೀರ್ ರೆಹಮಾನ್, ಮೆಹದಿ ಹಸನ್ ಮಿರಾಜ್, ಇಬಾದತ್ ಹುಸೇನ್, ಪರ್ವೇಜ್ ಹುಸೇನ್ ಎಮಾನ್, ನೂರುಲ್ ಹಸನ್, ತಸ್ಕಿನ್ ಅಹಮದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.