ADVERTISEMENT

ಶಿವಮೊಗ್ಗ, ಧಾರವಾಡ, ಮೈಸೂರು ವಲಯಗಳಿಗೆ ಜಯ

ಕೆಎಸ್‌ಸಿಎ 23 ವರ್ಷದೊಳಗಿನವರ ಅಂತರವಲಯ ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 14:05 IST
Last Updated 5 ಜನವರಿ 2021, 14:05 IST
ನಿಕಿನ್ ಜೋಸ್–ಪ್ರಜಾವಾಣಿ ಚಿತ್ರ
ನಿಕಿನ್ ಜೋಸ್–ಪ್ರಜಾವಾಣಿ ಚಿತ್ರ   

ಬೆಂಗಳೂರು: ಶಿವಮೊಗ್ಗ, ಧಾರವಾಡ ಹಾಗೂ ಮೈಸೂರು ವಲಯ ತಂಡಗಳು ಕೆಎಸ್‌ಸಿಎ 23 ವರ್ಷದೊಳಗಿನವರಅಂತರ ವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ ಜಯ ಸಾಧಿಸಿದವು.

ಐಎಎಫ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶಿವಮೊಗ್ಗ ತಂಡವು ಎಂಟು ರನ್‌ಗಳಿಂದ ಮಂಗಳೂರು ವಲಯವನ್ನು ಮಣಿಸಿತು. ಕಿಣಿ ಸ್ಪೋರ್ಟ್ಸ್ ಅರೆನಾದಲ್ಲಿ ನಡೆದ ಹಣಾಹಣಿಯಲ್ಲಿ ಧಾರವಾಡ ವಲಯ ತಂಡವು 4 ವಿಕೆಟ್‌ಗಳಿಂದ ತುಮಕೂರು ವಲಯವನ್ನು ಸೋಲಿಸಿತು. ಬಿಜಿಎಸ್‌ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಮೈಸೂರು ವಲಯ ತಂಡಕ್ಕೆ ರಾಯಚೂರು ವಲಯದ ವಿರುದ್ಧ 46 ರನ್‌ಗಳ ಜಯ ಒಲಿಯಿತು.

ಸಂಕ್ಷಿಪ್ತ ಸ್ಕೋರು: ಶಿವಮೊಗ್ಗ ವಲಯ: 39 ಓವರ್‌ಗಳಲ್ಲಿ 119 (ಚಂದನ್‌ ಡಿ.ಪಿ. 33, ಅಬು 22; ಅಭಿಲಾಷ್ ಶೆಟ್ಟಿ 14ಕ್ಕೆ 4, ಸ್ಪರ್ಶ್‌ ಅನೂಪ್ ಹೆಗ್ಡೆ 6ಕ್ಕೆ 2). ಮಂಗಳೂರು ವಲಯ: 26.3 ಓವರ್‌ಗಳಲ್ಲಿ 111 (ಅರವಿಂದ್ ಎಸ್‌. 27, ನಿಶ್ಚಿತ್ ಎನ್‌.ರಾವ್‌ ಔಟಾಗದೆ 22; ಆದಿತ್ಯ ಎಸ್‌.ಎಸ್‌. 42ಕ್ಕೆ 7). ಫಲಿತಾಂಶ: ಶಿವಮೊಗ್ಗ ವಲಯಕ್ಕೆ 8 ರನ್‌ಗಳ ಜಯ.

ADVERTISEMENT

ತುಮಕೂರು ವಲಯ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 171 (ನಿರ್ಮಿತ್ ಶಶಿಧರ್‌ 28, ಶ್ರೇಯಸ್ ಕೆ.ಬಿ. 26, ಪುನೀತ್ ಔಟಾಗದೆ 54; ರೋಹಿತ್ ಕುಮಾರ್‌ ಎ.ಸಿ. 3ಕ್ಕೆ 3, ಇಂದ್ರಸೇನ ಟಿ. ದಾನಿ 45ಕ್ಕೆ 2). ಧಾರವಾಡ ವಲಯ: 39.3 ಓವರ್‌ಗಳಲ್ಲಿ 6 ವಿಕೆಟ್‌ಗೆ 172 (ಸುಧನ್ವ ಕುಲಕರ್ಣಿ ಔಟಾಗದೆ 60, ಚಿರಾಗ್ ಆರ್‌.ನಾಯಕ್‌ 24, ಇಂದ್ರಸೇನ್ ಟಿ.ದಾನಿ 35; ಅಭಿಷೇಕ್ ಎಚ್‌.ಪಿ 25ಕ್ಕೆ 2, ಪುನೀತ್ 60ಕ್ಕೆ 2). ಫಲಿತಾಂಶ: ಧಾರವಾಡ ವಲಯಕ್ಕೆ 4 ವಿಕೆಟ್‌ಗಳ ಜಯ.

ಮೈಸೂರು ವಲಯ: 48.1 ಓವರ್‌ಗಳಲ್ಲಿ 210 (ನಿಕಿನ್‌ ಜೋಸ್‌ ಔಟಾಗದೆ 101, ಕೃತಿಕ್ ಕೃಷ್ಣ 23, ಯಶಸ್‌ ಜಿ.ಎಲ್‌. 34; ವಿದ್ಯಾಧರ್‌ ಪಾಟೀಲ 38ಕ್ಕೆ 2, ಭೀಮ್ ರಾವ್‌ 40ಕ್ಕೆ 2, ಸೌರಭ್‌ ಮುತ್ತೂರ್‌ 40ಕ್ಕೆ 3). ರಾಯಚೂರು ವಲಯ: 42.4 ಓವರ್‌ಗಳಲ್ಲಿ 164 (ಪ್ರೀತೀಶ್‌ 36, ವಿದ್ಯಾಧರ್ ಪಾಟೀಲ 45, ಮಾಧವ ಪಿ. ಬಜಾಜ್‌ 26; ಯಶಸ್‌ ಜಿ.ಎಲ್‌. 30ಕ್ಕೆ 2, ಯೋಧನ್ ಹೃದಯ್‌ ಜಿ.ಎಸ್‌. 20ಕ್ಕೆ 2, ಅಂಕಿತ್‌ ಎಸ್‌. 18ಕ್ಕೆ 3). ಫಲಿತಾಂಶ: ಮೈಸೂರು ವಲಯಕ್ಕೆ 46 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.