ADVERTISEMENT

ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಭಾರತ ‘ಎ’ ತಂಡದಿಂದ ಹೊರಬಿದ್ದ ಶ್ರೇಯಾಂಕ, ಪ್ರಿಯಾ

ಪಿಟಿಐ
Published 24 ಜುಲೈ 2025, 16:26 IST
Last Updated 24 ಜುಲೈ 2025, 16:26 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ನವದೆಹಲಿ: ಆಫ್‌ ಸ್ಪಿನ್ನರ್ ಶ್ರೇಯಾಂಕ ಪಾಟೀಲ ಮತ್ತು ಲೆಗ್‌ ಸ್ಪಿನ್ನರ್ ಪ್ರಿಯಾ ಮಿಶ್ರಾ ಅವರು ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಭಾರತ ತಂಡದಿಂದ ಹೊರಬಿದ್ದಿದ್ದಾರೆ.

ADVERTISEMENT

ಫಿಟ್ನೆಸ್‌ ಪಡೆದಲ್ಲಿ ಮಾತ್ರ ಅವರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಬಿಸಿಸಿಐ ಜುಲೈ 10ರಂದು ತಂಡ ಪ್ರಕಟಿಸುವ ಸಂದರ್ಭದಲ್ಲಿ ತಿಳಿಸಿತ್ತು. ಆದರೆ ಇಬ್ಬರೂ ಶ್ರೇಷ್ಠತಾ ಕೇಂದ್ರದಲ್ಲಿ ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿ ಇದ್ದಾರೆ.

ಶ್ರೇಯಾಂಕ ಟಿ20 ತಂಡದಲ್ಲಿ ಆಡಬೇಕಿತ್ತು. ಪ್ರಿಯಾ ಮಿಶ್ರಾ ಏಕದಿನ ಮತ್ತು ನಾಲ್ಕು ದಿನಗಳ ಪಂದ್ಯ ಆಡುವ ತಂಡದಲ್ಲಿ ಸ್ಥಾನ ಪಡೆದಿದ್ದರು.

ಆಸ್ಟ್ರೇಲಿಯಾ ಪ್ರವಾಸ ಆ. 7 ರಂದು ಮ್ಯಾಕೆಯಲ್ಲಿ ಮೊದಲ ಟಿ20 ಪಂದ್ಯದೊಡನೆ ಆರಂಭವಾಗಬೇಕಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.