
ಸ್ಮೃತಿ ಮಂದಾನ ಪಲಾಶ್ ಮುಚ್ಚಲ್
ನವದೆಹಲಿ: ಭಾರತ ಮಹಿಳಾ ತಂಡದ ಬ್ಯಾಟಿಂಗ್ ತಾರೆ ಸ್ಮೃತಿ ಮಂದಾನ ಅವರು ಸಂಗೀತ ನಿರ್ದೇಶಕ ಪಲಾಶ್ ಮುಚ್ಛಲ್ ಅವರ ಜೊತೆಗಿನ ವಿವಾಹಪೂರ್ವ ಸಂಭ್ರಮಾಚರಣೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಿಂದ ಅಳಿಸಿಹಾಕಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ಸ್ಮೃತಿ ಅವರ ತೋಟದ ಮನೆಯಲ್ಲಿ ಸಮಾರಂಭಗಳು ನಡೆದಿದ್ದವು.
ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ವಿವಾಹ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ಸ್ಮೃತಿ ಅವರ ಆಪ್ತ ಸ್ನೇಹಿತೆ ಹಾಗೂ ಸಹ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅವರೂ ಈ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಹಾಕಿದ್ದಾರೆ. ಇದಕ್ಕೆ ಲಕ್ಷಾಂತರ ಲೈಕ್‌ಗಳು ಬಂದಿದ್ದವು.
ಸಾಮಾಜಿಕ ಜಾಲತಾಣವೊಂದರ ಪೋಸ್ಟ್ ಹರಿದಾಡಿದ ಬೆನ್ನಲ್ಲೆ ಇವರಿಬ್ಬರ ನಡುವಣ ಸಂಬಂಧ ಹಳಸಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಆದರೆ ಮಂದಾನ ಅವರ ಕಡೆಯಿಂದಾಗಲಿ, ಪಲಾಶ್ ಕಡೆಯಿಂದಾಗಲಿ, ಈ ಬೆಳವಣಿಗೆಗೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.