ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬುಲಾವಯೊ (ಜಿಂಬಾಬ್ವೆ): ಹದಿಹರೆಯದ ಆಟಗಾರ ಲುಹಾನ್–ಡ್ರೆ ಪಿಟ್ರೋರಿಯಸ್ ಅವರು ಚೊಚ್ಚಲ ಪಂದ್ಯದಲ್ಲಿಯೇ ಬಿರುಸಿನ 153 ರನ್ (160ಎ) ಹೊಡೆದು ದಕ್ಷಿಣ ಆಫ್ರಿಕಾ ತಂಡ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಜಿಂಬಾಬ್ವೆ ವಿರುದ್ಧ ದೊಡ್ಡ ಮೊತ್ತ ಪೇರಿಸಲು ನೆರವಾದರು.
ಶನಿವಾರ ಮೊದಲ ದಿನದಾಟ ಮುಗಿದಾಗ ದಕ್ಷಿಣ ಆಫ್ರಿಕಾ 9 ವಿಕೆಟ್‌ಗೆ 418 ರನ್ ಗಳಿಸಿತ್ತು. ಕಾರ್ಬಿನ್ ಬಾಷ್ ಬರೋಬರಿ 100 ರನ್ (124ಎ, 4x10) ಗಳಿಸಿ ಅಜೇಯರಾಗುಳಿದಿದ್ದಾರೆ.
ಪ್ರಿಟೋರಿಯಸ್ ಅವರು ದಕ್ಷಿಣ ಆಫ್ರಿಕಾ ಪರ ಶತಕ ಹೊಡೆದ ಅತಿ ಕಿರಿಯ (19 ವರ್ಷ 93 ದಿನ) ಬ್ಯಾಟರ್ ಎನಿಸಿದರು. ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ ತಮ್ಮ ದೇಶದ ಏಳನೇ ಬ್ಯಾಟರ್ ಎನಿಸಿದರು ಕೂಡ. ಅವರ ಆಟದಲ್ಲಿ 11 ಬೌಂಡರಿ, ನಾಲ್ಕು ಸಿಕ್ಸರ್‌ಗಳಿದ್ದವು.
ಈ ಹಿಂದೆ ಗ್ರೇಮ್ ಪೊಲಾಕ್ ಅವರು 19 ವರ್ಷ 317 ದಿನಗಳಾಗಿದ್ದಾಗ ಶತಕ ಹೊಡೆದಿದ್ದು ಈ ಸಾಧನೆಗೈದ ದಕ್ಷಿಣ ಆಫ್ರಿಕಾದ ಅತಿ ಕಿರಿಯ ಆಟಗಾರ ಎನಿಸಿದ್ದರು. 1963/64ರಲ್ಲಿ ಅವರು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 120 ರನ್ ಬಾರಿಸಿದ್ದರು.
ಪ್ರಿಟೋರಿಯಸ್ ಅವರು ಆಡಲು ಬಂದಾಗ ದಕ್ಷಿಣ ಆಫ್ರಿಕಾ ಈ ಮೊತ್ತ ಗಳಿಸುವ ಸಾಧ್ಯತೆ ದೂರವಾದಂತೆ ಕಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗಿಗೆ ನಿರ್ಧರಿಸಿದ ತಂಡ ಮೊತ್ತ 3 ವಿಕೆಟ್‌ಗೆ ಕೇವಲ 23 ರನ್ ಗಳಿಸಿದ್ದ ವೇಳೆ ಅವರು ಆಡಲಿಳಿದಿದ್ದರು.
ಮೊತ್ತ 55 ಆಗಿದ್ದಾಗ ವಿಯಾನ್ ಮುಲ್ಡರ್ ನಿರ್ಗಮಿಸಿದರು. ಈ ಹಂತದಲ್ಲಿ ಅವರು ಡೆವಾಲ್ಡ್ ಬ್ರೆವಿಸ್ (51) ಜೊತೆ 95 ರನ್ ಸೇರಿಸಿ ತಂಡದ ರಕ್ಷಣೆಗೆ ನಿಂತರು. ನಂತರ ಕಾರ್ಬಿನ್ ಬಾಷ್ ಜೊತೆ ಏಳನೇ ವಿಕೆಟ್‌ಗೆ 108 (136ಎ) ಸೇರಿಸಿದ್ದರಿಂದ ತಂಡ ಸುರಕ್ಷಿತ ಮೊತ್ತದತ್ತ ಕಾಲಿಟ್ಟಿತು.
ಸ್ಕೋರುಗಳು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 90 ಓವರುಗಳಲ್ಲಿ 9ಕ್ಕೆ 418 (ಲುಹಾನ್–ಡ್ರೆ ಪಿಟ್ರೋರಿಯಸ್ 153, ಡೆವಾಲ್ಡ್ ಬ್ರೆವಿಸ್ 51, ಕಾರ್ಬಿನ್ ಬಾಷ್ ಔಟಾಗದೇ 100; ಬ್ಲೆಸಿಂಗ್ ಮುಝರಾಬನಿ ತನಕ ಚಿವಾಂಗ 83ಕ್ಕೆ4) ವಿರುದ್ಧ ಜಿಂಬಾಬ್ವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.