ಕೊಲಂಬೊ: ಆಘಾ ಸಲ್ಮಾನ್ ಅವರ ಸುಂದರ ಶತಕದ ಬಲದಿಂದ ಪಾಕಿಸ್ತಾನ ತಂಡವು ಇಲ್ಲಿ ಶ್ರೀಲಂಕಾ ಎದುರು ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮುನ್ನಡೆ ಸಾಧಿಸಿದೆ.
ಪಂದ್ಯದ ಮೂರನೇ ದಿನವಾದ ಬುಧವಾರ ಸಲ್ಮಾನ್ (ಬ್ಯಾಟಿಂಗ್ 132; 148ಎ, 4X15, 6X1) ಅವರ ಅಟದಿಂದ ತಂಡವು 132 ಓವರ್ಗಳಲ್ಲಿ 5 ವಿಕೆಟ್ಗಳಿಗೆ 563 ರನ್ ಗಳಿಸಿದೆ. ಒಟ್ಟು 397 ರನ್ಗಳ ಮುನ್ನಡೆ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಶ್ರೀಲಂಕಾ 48.4 ಓವರ್ಗಳಲ್ಲಿ 166.
ಪಾಕಿಸ್ತಾನ: 132 ಓವರ್ಗಳಲ್ಲಿ 5 ವಿಕೆಟ್ಗಳಿಗೆ 563 (ಅಬ್ದುಲ್ ಶಫೀಕ್ 201, ಸೌದ್ ಶಕೀತ್ 57, ಆಘಾ ಸಲ್ಮಾನ್ ಬ್ಯಾಟಿಂಗ್ 132, ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ 37,ಅಶಿತ್ ಫರ್ನಾಂಡೊ 133ಕ್ಕೆ3, ಪ್ರಭಾತ್ ಜಯಸೂರ್ಯ 181ಕ್ಕೆ2)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.