ADVERTISEMENT

IND vs ENG: ಸೂರ್ಯಕುಮಾರ್, ಶ್ರೇಯಸ್ ಅಬ್ಬರ: ಇಂಗ್ಲೆಂಡ್‌ಗೆ 186 ರನ್ ಗುರಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 15:51 IST
Last Updated 18 ಮಾರ್ಚ್ 2021, 15:51 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಅಹಮದಾಬಾದ್: 4ನೇ ಮತ್ತು ಗೆಲ್ಲಲೇಬೇಕಾದ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 185 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ.

ಈ ಬಾರಿಯೂ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದಿದ್ದ ಭಾರತ ತಂಡ ಸೂರ್ಯ ಕುಮಾರ್ ಯಾದವ್(57) ಅವರ ಅಮೋಘ ಅರ್ಧಶತಕ ಮತ್ತು ಶ್ರೇಯಸ್ ಅಯ್ಯರ್(37) ಅವರ ಸ್ಫೋಟಕ ಆಟದ ನೆರವಿನಿಂದ ಇಂಗ್ಲೆಂಡ್‌ಗೆ 186 ರನ್ ಗುರಿ ನೀಡಿದೆ.

ರೋಹಿತ್ ಶರ್ಮಾ(12), ಕೆ.ಎಲ್.ರಾಹುಲ್(14) ಮತ್ತು ನಾಯಕ ವಿರಾಟ್ ಕೊಹ್ಲಿ(1) ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಆರಂಭದಲ್ಲಿ ವಿಕೆಟ್‌ಗಳು ಉರುಳಿ ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದ ಸೂರ್ಯ ಕುಮಾರ್ ಯಾದವ್ 31 ಎಸೆತಗಳಲ್ಲಿ 57 ರನ್ ಸಿಡಿಸುವ ಮೂಲಕ ಭಾರತದ ಈ ಸ್ಪರ್ಧಾತ್ಮಕ ಮೊತ್ತಕ್ಕೆ ಬುನಾದಿಯಾದರು. ಇದರಲ್ಲಿ ಅಮೋಘ 3 ಸಿಕ್ಸರ್ ಮತ್ತು 6 ಬೌಂಡರಿಗಳಿದ್ದವು.

ADVERTISEMENT

ಸೂರ್ಯಕುಮರ್ ನಿರ್ಗಮನದ ಬಳಿಕ ಅಬ್ಬರಿಸಿದ ಶ್ರೇಯಸ್ ಅಯ್ಯರ್ 18 ಎಸೆತಗಳಲ್ಲಿ 37 ರನ್ ಸಿಡಿಸಿದರು. ಶ್ರೇಯಸ್‌ಗೆ ಉತ್ತಮ ಸಾಥ್ ಕೊಟ್ಟ ರಿಷಬ್ ಪಂತ್ 30 ರನ್ ಗಳಿಸಿದರು.

ಒಂದು ಹಂತದಲ್ಲಿ ಭಾರತದ ಸ್ಕೋರ್ 190ರ ಗಡಿ ದಾಟುವ ಸೂಚನೆ ಇತ್ತಾದರೂ ಅಂತಿಮ ಹಂತದಲ್ಲಿ ಪಟಪಟನೆ ವಿಕೆಟ್‌ಗಳು ಉರುಳಿದ್ದರಿಂದ ಭಾರತದ ರನ್ ಓಟ 185ಕ್ಕೆ ನಿಂತುಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.