ADVERTISEMENT

ಕ್ರಿಕೆಟ್‌: ಸ್ವಸ್ತಿಕ್‌ ಯೂನಿಯನ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಮೇ 2019, 17:19 IST
Last Updated 20 ಮೇ 2019, 17:19 IST
ಕೆಎಸ್‌ಸಿಎ 19 ವರ್ಷದೊಳಗಿನವರ ಅಂತರ ಕ್ಲಬ್‌ (ಗುಂಪು–1, ಡಿವಿಷನ್‌–1, 2,3) ಕ್ರಿಕೆಟ್‌ ಟೂರ್ನಿಯಲ್ಲಿ ಟ್ರೋಫಿ ಜಯಿಸಿದ ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2) ತಂಡದವರು (ನಿಂತವರು; ಎಡದಿಂದ) ತುಷಾರ್‌, ನಿರ್ಮಲ್‌, ಶ್ರೇಷ್ಠ, ಶುಭಂ ಕುಮಾರ್‌ ಸಿನ್ಹಾ, ಕಪಿಲ್‌, ಆಯುಷ್‌, ತಾಹ (ಮ್ಯಾನೇಜರ್‌), ಕುಲದೀಪ್‌ (ಟ್ರೈನರ್‌), ಕಾರ್ತಿಕ್‌, ದಿನೇಶ್‌ ಮತ್ತು ಸೂರಜ್‌. (ಕುಳಿತವರು) ಅಜಿತೇಶ್‌, ತನೀಷ್‌, ಸಮರ್ಥ್ ಹೆಗ್ಡೆ (ಕೋಚ್‌), ನಾಸೀರುದ್ದೀನ್‌ (ಕೋಚ್‌), ದೇವದತ್ತ ಪಡಿಕ್ಕಲ್‌, ಇರ್ಫಾನ್‌ ಸೇಠ್‌ (ಮುಖ್ಯ ಕೋಚ್‌), ಜಸ್ವಂತ್ ಆಚಾರ್ಯ, ಚಿನ್ಮಯ್‌ ಮತ್ತು ಅಕೀಬ್

ಬೆಂಗಳೂರು: ಜಸ್ವಂತ್‌ ಆಚಾರ್ಯ (135; 137ಎ, 13ಬೌಂ, 6ಸಿ) ಮತ್ತು ದೇವದತ್ತ ಪಡಿಕ್ಕಲ್‌ (99) ಅವರ ಆಕರ್ಷಕ ಆಟದಿಂದಾಗಿ ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2) ತಂಡವು ಕೆಎಸ್‌ಸಿಎ 19 ವರ್ಷದೊಳಗಿನವರ ಅಂತರ ಕ್ಲಬ್‌ (ಗುಂಪು–1, ಡಿವಿಷನ್‌–1, 2,3) ಕ್ರಿಕೆಟ್‌ ಟೂರ್ನಿಯಲ್ಲಿ ಟ್ರೋಫಿ ಜಯಿಸಿದೆ.

ಫೈನಲ್‌ನಲ್ಲಿ ಸ್ವಸ್ತಿಕ್‌ ಯೂನಿಯನ್‌ ತಂಡವು ಬೆಂಗಳೂರು ಅಕೇಷನಲ್ಸ್‌ ಎದುರು ಡ್ರಾ ಮಾಡಿಕೊಂಡಿತು. ಇನಿಂಗ್ಸ್‌ ಮುನ್ನಡೆ ಪಡೆದಿದ್ದರಿಂದ ತಂಡಕ್ಕೆ ಪ್ರಶಸ್ತಿ ಲಭಿಸಿತು.

ಸಂಕ್ಷಿಪ್ತ ಸ್ಕೋರ್‌: ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2): ಮೊದಲ ಇನಿಂಗ್ಸ್‌: 91.4 ಓವರ್‌ಗಳಲ್ಲಿ 379 (ಜಸ್ವಂತ್ ಆಚಾರ್ಯ 135, ದೇವದತ್ತ ಪಡಿಕ್ಕಲ್‌ 99, ಆಯುಷ್‌ ಕುಮಾರ್‌ ಬಾರಿಕ್‌ 34, ಶುಭಂ ಕುಮಾರ್‌ ಸಿನ್ಹಾ 42; ಭೀಮ ರಾವ್‌ 69ಕ್ಕೆ3, ಎಸ್‌ಎಸ್‌ಜಿ ರೋಹಿತ್‌ 160ಕ್ಕೆ3, ಹೃಷಿಕೇಶ್‌ 26ಕ್ಕೆ2). ಎರಡನೇ ಇನಿಂಗ್ಸ್‌: 20.5 ಓವರ್‌ಗಳಲ್ಲಿ 3 ವಿಕೆಟ್‌ಗೆ 191 ಡಿಕ್ಲೇರ್ಡ್‌ (ಜಸ್ವಂತ್‌ ಆಚಾರ್ಯ 35, ದೇವದತ್ತ ಪಡಿಕ್ಕಲ್‌ 82, ಮೊಹಮ್ಮದ್‌ ಎ ಜವಾದ್‌ ಔಟಾಗದೆ 51; ಯುವರಾಜ್‌ ಸಿಂಗ್‌ 27ಕ್ಕೆ2).

ADVERTISEMENT

ಬೆಂಗಳೂರು ಅಕೇಷನಲ್ಸ್‌: ಪ್ರಥಮ ಇನಿಂಗ್ಸ್‌: 46.1 ಓವರ್‌ಗಳಲ್ಲಿ 173 (ಜಿ.ರಿತಿನ್‌ ಕ್ರಿಸ್ಟಿ 27, ಭೀಮ ರಾವ್‌ 31, ಶ್ರೀಹರಿ ಪಿ.ಮದ್ಯಾಲಕರ್‌ 48; ತನೀಷ್‌ ಮಹೇಶ್‌ 25ಕ್ಕೆ3, ಎನ್‌.ಎ.ಚಿನ್ಮಯ್‌ 42ಕ್ಕೆ3, ಶುಭಂ ಕುಮಾರ್‌ ಸಿನ್ಹಾ 31ಕ್ಕೆ3).

ಫಲಿತಾಂಶ: ಡ್ರಾ. ಸ್ವಸ್ತಿಕ್‌ ಯೂನಿಯನ್‌ಗೆ ಇನಿಂಗ್ಸ್‌ ಮುನ್ನಡೆ ಹಾಗೂ ಪ್ರಶಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.