ADVERTISEMENT

ಕ್ರಿಕೆಟ್: ಬೆಂಗಳೂರಿನಲ್ಲಿ ಟ್ವೆಂಟಿ–20 ಕಲರವ

2019–20 ಸಾಲಿನಲ್ಲಿ ತವರು ನೆಲದಲ್ಲಿ ಭಾರತ ಕ್ರಿಕೆಟ್‌ ತಂಡ ಆಡುವ ಪಂದ್ಯಗಳ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 18:54 IST
Last Updated 4 ಜೂನ್ 2019, 18:54 IST

ನವದೆಹಲಿ (ರಾಯಿಟರ್ಸ್): ಸೆಪ್ಟೆಂಬರ್‌ 22ರಂದು ಬೆಂಗಳೂರಿನಲ್ಲಿ ನಡೆಯುವಟ್ವೆಂಟಿ–20 ಪಂದ್ಯದಲ್ಲಿ ಭಾರತ ಮತ್ತುದಕ್ಷಿಣ ಆಫ್ರಿಕಾ ತಂಡಗಳುಮುಖಾಮುಖಿಯಾಗಲಿವೆ. 2019–20ರ ಋತುವಿನಲ್ಲಿ ಭಾರತದಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯಗಳನ್ನು ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. 2020ರ ಜನವರಿ 19ರಂದು ನಡೆಯುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪೈಪೋಟಿಗೂ ಬೆಂಗಳೂರು ಸಾಕ್ಷಿಯಾಗಲಿದೆ.

ಈ ವರ್ಷದ ಕೊನೆಯಲ್ಲಿ ಕೊಹ್ಲಿ ಪಡೆ ಐದು ಟೆಸ್ಟ್‌ ಪಂದ್ಯಗಳನ್ನು ಆಡಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆರಂಭವಾಗಲಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ವಿಶ್ವ ಟೆಸ್ಟ್‌ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಸೆಪ್ಟೆಂಬರ್ 15ರಿಂದ ಮೂರು ಟ್ವೆಂಟಿ–20 ಹಾಗೂಅಕ್ಟೋಬರ್‌ನಲ್ಲಿ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಸೆಣಸಲಿದೆ.

ADVERTISEMENT

ಈ ವರ್ಷದ ನವೆಂಬರ್‌ನಲ್ಲಿ ಬಾಂಗ್ಲಾ ವಿರುದ್ಧ ಎರಡು ಟೆಸ್ಟ್‌ ಹಾಗೂ ಮೂರುಟ್ವೆಂಟಿ–20 ಪಂದ್ಯಗಳಲ್ಲಿ ಬಾಂಗ್ಲಾ ವಿರುದ್ಧ ಕಣಕ್ಕಿಳಿಯಲಿದೆ.

ಭಾರತ ತಂಡ ತವರಿನಲ್ಲಿ ಒಟ್ಟು ಒಂಬತ್ತು ಏಕದಿನ ಹಾಗೂ 12ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ. ಡಿಸೆಂಬರ್‌ನಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಜನವರಿಯಲ್ಲಿ ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾರತಕ್ಕೆ ಆಗಮಿಸಲಿವೆ.

2021ರ ಮಾರ್ಚ್‌ನಲ್ಲಿ ಕೊಹ್ಲಿ ನೇತೃತ್ವದ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.