ADVERTISEMENT

ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿ: ಆಸ್ಟ್ರೇಲಿಯಾಗೆ ಮಣಿದ ಭಾರತ

ಎಲಿಸೆ ಆಲ್‌ರೌಂಡ್‌ ಆಟ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 18:50 IST
Last Updated 2 ಫೆಬ್ರುವರಿ 2020, 18:50 IST
ಎಲಿಸೆ ಪೆರಿ
ಎಲಿಸೆ ಪೆರಿ   

ಕ್ಯಾನ್‌ಬೆರಾ: ಎಲಿಸೆ ಪೆರಿ ಅವರ ಆಲ್‌ರೌಂಡ್ ಆಟದ ಬಲದಿಂದ ಆಸ್ಟ್ರೇಲಿಯಾ ತಂಡ ಮಹಿಳಾ ತ್ರಿಕೋನ ಟ್ವೆಂಟಿ–20 ಸರಣಿಯ ಪಂದ್ಯದಲ್ಲಿ ಭಾರತ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು.

ಇಲ್ಲಿ ನಡೆದ ಹಣಾಹಣಿಯಲ್ಲಿ ಪೆರಿ, 4 ವಿಕೆಟ್‌ ಕಿತ್ತರಲ್ಲದೆ 49 ರನ್‌ ದಾಖಲಿಸಿ ಮಿಂಚಿದರು.

ಮೊದಲು ಬ್ಯಾಟ್‌ ಮಾಡಿದ ಭಾರತ, ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 103 ರನ್‌ ಗಳಿ ಸಲು ಶಕ್ತವಾಯಿತು.

ADVERTISEMENT

ಇನಿಂಗ್ಸ್ ಆರಂಭಿಸಿದ ಶೆಫಾಲಿ ವರ್ಮಾ– ಸ್ಮೃತಿ ಮಂದಾನ ಜೋಡಿ 15 ರನ್‌ಗಳಾಗುವಷ್ಟರಲ್ಲಿ ಬೇರ್ಪ ಟ್ಟಿತು. ಶೆಫಾಲಿ (5) ಪೆರಿಗೆ ಮೊದಲ ಬಲಿಯಾದರು. ಜೆಮಿಮಾ ರಾಡ್ರಿಗಸ್‌ ಒಂದು ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರು. ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಮಂದಾನ (35, 23 ಎಸೆತ, ಮೂರು ಬೌಂಡರಿ, 2 ಸಿಕ್ಸರ್‌) ಹಾಗೂ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (28, 32 ಎಸೆತ, 4 ಬೌಂಡರಿ) 40 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಇವರಿಬ್ಬರು ಔಟಾದ ಬಳಿಕ ತಂಡ ಕುಸಿತದ ಹಾದಿ ಹಿಡಿಯಿತು.

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡದ ಆರಂಭವೂ ಉತ್ತಮವಾಗಿರ ಲಿಲ್ಲ. ಕೇವಲ 1 ರನ್‌ ಆಗುವಷ್ಟರಲ್ಲಿ ಆ ತಂಡದ ಮೊದಲ ವಿಕೆಟ್‌ ಪತನಗೊಂಡಿತ್ತು. ಆ್ಯಶ್ಲೆ ಗಾರ್ಡನರ್‌ (22) ಹಾಗೂ ಎಲಿಸೆ ಪೆರಿ ಜೊತೆಯಾಟಗಳನ್ನು ಬೆಳೆಸಿದ್ದರಿಂದ ಚೇತ ರಿಸಿಕೊಂಡಿತು. ಏಳು ಎಸೆತಗಳು ಬಾಕಿ ಇರುವಂತೆ ಆರು ವಿಕೆಟ್‌ ಕಳೆದು ಕೊಂಡು ಗೆದ್ದು ಬೀಗಿತು. ಭಾರತದ ರಾಜೇಶ್ವರಿ ಗಾಯಕವಾಡ್‌ ಎರಡು ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಭಾರತ : 20 ಓವರ್‌ ಗಳಲ್ಲಿ 9 ವಿಕೆಟ್‌ಗೆ 103 (ಸ್ಮೃತಿ ಮಂದಾನ 35, ಹರ್ಮನ್‌ಪ್ರೀತ್‌ ಕೌರ್‌ 28 ; ಎಲಿಸೆ ಪೆರಿ 13ಕ್ಕೆ 4, ತಯ್ಲಾ ಲೆಮಿಂಕ್‌ 13ಕ್ಕೆ 3). ಆಸ್ಟ್ರೇಲಿಯಾ : 18.5 ಓವರ್‌ಗಳಲ್ಲಿ 6 ವಿಕೆಟ್‌ಗೆ 104 (ಎಲಿಸೆ ಪೆರಿ 49, ಆ್ಯಶ್ಲೆ ಗಾರ್ಡನರ್‌ 22; ರಾಜೇಶ್ವರಿ ಗಾಯಕವಾಡ್‌ 18ಕ್ಕೆ 2, ಅರುಂಧತಿ ರೆಡ್ಡಿ 17ಕ್ಕೆ 1, ದೀಪ್ತಿ ಶರ್ಮಾ 18ಕ್ಕೆ 1) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 4 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.