ADVERTISEMENT

ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ ಬಿಡ್ ಇಂದು

ಕಣದಲ್ಲಿ ಸ್ನೇಹ ರಾಣಾ, ಹೀಥರ್ ನೈಟ್

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 20:28 IST
Last Updated 14 ಡಿಸೆಂಬರ್ 2024, 20:28 IST
ಸ್ನೇಹ ರಾಣಾ 
ಸ್ನೇಹ ರಾಣಾ    

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಆಟಗಾರ್ತಿಯರ ಬಿಡ್ ಪ್ರಕ್ರಿಯೆ ಭಾನುವಾರ ನಡೆಯಲಿದೆ. ಒಟ್ಟು 120 ಆಟಗಾರ್ತಿಯರು ಸ್ಪರ್ಧೆಯಲ್ಲಿದ್ದಾರೆ.  ಒಟ್ಟು ಐದು ಫ್ರ್ಯಾಂಚೈಸಿಗಳು ಬಿಡ್ ಮಾಡಲಿವೆ.

ಇದರಲ್ಲಿ 91 ಭಾರತೀಯ ಮತ್ತು 29 ವಿದೇಶಿ ಆಟಗಾರ್ತಿಯರು ಇದ್ದಾರೆ.   

ಬಹುತೇಕ ಎಲ್ಲ ಫ್ರ್ಯಾಂಚೈಸಿಗಳು ತಮ್ಮ ತಂಡಗಳ ಪ್ರಮುಖ ಆಟಗಾರ್ತಿಯರನ್ನು ರಿಟೇನ್ ಮಾಡಿಕೊಂಡಿವೆ. 

ADVERTISEMENT

ಅದರಿಂದಾಗಿ 19 ಆಟಗಾರ್ತಿಯರಿಗಾಗಿ ಅವಕಾಶ ಇದೆ. ಇದರಲ್ಲಿ ಐವರು ವಿದೇಶಿ ಆಟಗಾರ್ತಿಯರಿದ್ದಾರೆ. 

ಈ ಬಿಡ್‌ನಲ್ಲಿ ಪ್ರಮುಖ ಆಟಗಾರ್ತಿಯರಾದ ತೇಜಲ್ ಹಸಬ್ನಿಸ್, ಸ್ನೇಹ ರಾಣಾ (ಭಾರತ), ದಿಯಾಂದ್ರ ಡಾಟಿನ್ (ವೆಸ್ಟ್ ಇಂಡೀಸ್), ಹೀಥರ್ ನೈಟ್ (ಇಂಗ್ಲೆಂಡ್), ಒರ್ಲಾ ಪ್ರೆಂಡರ್‌ಗಸ್ತ್ (ಐರ್ಲೆಂಡ್), ಲಾರೆನ್ ಬೆಲ್ (ಇಂಗ್ಲೆಂಡ್), ಕಿಮ್ ಗಾರ್ತ್ (ಆಸ್ಟ್ರೇಲಿಯಾ) ಮತ್ತು ಡೇನೀಲ್ ಗಿಬ್ಸನ್ (ಇಂಗ್ಲೆಂಡ್) ಅವರು ಇದ್ದಾರೆ. 

ಹೀಥರ್ ನೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.