ADVERTISEMENT

ಕ್ರಿಕೆಟ್: ಸರಣಿ ಸಮಬಲದತ್ತ ಭಾರತ ಚಿತ್ತ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 15:47 IST
Last Updated 29 ನವೆಂಬರ್ 2022, 15:47 IST
ಟಾಮ್ ಲಥಾಮ್
ಟಾಮ್ ಲಥಾಮ್   

ಕ್ರೈಸ್ಟ್‌ಚರ್ಚ್‌ (ಪಿಟಿಐ): ಬುಧವಾರ ಇಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ಸರಣಿಯ ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡವು ಎರಡನೇ ಪಂದ್ಯದಲ್ಲಿ ಗೆದ್ದು ಸಮಬಲ ಸಾಧಿಸುವ ಆಸೆಯು ಮಳೆಯಲ್ಲಿ ಕೊಚ್ಚಿಹೋಗಿತ್ತು. ಆದ್ದರಿಂದ ಮೂರನೇ ಪಂದ್ಯ ನಡೆದರೆ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಲು ಒಂದು ಅವಕಾಶ ಶಿಖರ್ ಧವನ್ ಬಳಗಕ್ಕೆ ಲಭಿಸಲಿದೆ. ಅಲ್ಲದೇ ಆತಿಥೇಯರಿಗೂ ಜಯದ ಅವಕಾಶ ಸಿಗಲಿದ್ದು, ಟಿ20 ಸರಣಿ ಸೋಲಿನ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ.

ಟಿ20 ಸರಣಿಯಲ್ಲಿಯೂ ಮಳೆಯ ಆಟವೇ ಹೆಚ್ಚು ನಡೆದಿತ್ತು. ಮೊದಲ ಪಂದ್ಯವು ರದ್ದಾಗಿತ್ತು. ಎರಡನೇಯದ್ದರಲ್ಲಿ ಭಾರತ ಜಯಿಸಿತ್ತು. ಮೂರನೇ ಪಂದ್ಯಕ್ಕೂ ಮಳೆ ತಡೆಯೊಡ್ಡಿದ್ದಾಗ ಡಕ್ವರ್ಥ್ –ಲೂಯಿಸ್ ನಿಯಮದಲ್ಲಿ ಟೈ ಆಗಿತ್ತು. ಅದರಿಂದಾಗಿ ಭಾರತಕ್ಕೆ ಸರಣಿ ಒಲಿದಿತ್ತು.

ADVERTISEMENT

ಆದರೆ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೂನ್ನೂರಕ್ಕೂ ಹೆಚ್ಚು ರನ್‌ಗಳ ಗುರಿ ನೀಡಿದ್ದ ಭಾರತ ತಂಡ ಬೌಲಿಂಗ್‌ನಲ್ಲಿ ಹಿನ್ನಡೆ ಅನುಭವಿಸಿತ್ತು. ಟಾಮ್ ಲಥಾಮ್ ಶತಕ ಹೊಡೆದು ತಮ್ಮ ತಂಡವನ್ನು ಗೆಲ್ಲಿಸಿದ್ದರು.

ಈ ಪಂದ್ಯದಲ್ಲಿಯೂ ಉಭಯ ತಂಡಗಳು ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿಯುವ ಸಾಧ್ಯತೆ ಇದೆ.

ತಂಡಗಳು: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಸಂಜು ಸ್ಯಾಮ್ಸನ್ (ಇಬ್ಬರೂ ವಿಕೆಟ್‌ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ದೀಪಕ್ ಚಾಹರ್, ಆರ್ಷದೀಪ್ ಸಿಂಗ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಡೆವೊನ್ ಕಾನ್ವೆ, ಟಾಮ್ ಲಥಾಮ್, ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಬ್ರೇಸ್‌ವೆಲ್, ಟಿಮ್ ಸೌಥಿ, ಮ್ಯಾಟ್ ಹೆನ್ರಿ, ಆ್ಯಡಂ ಮಿಲ್ನೆ, ಜಿಮ್ಮಿ ನಿಶಾಮ್, ಮಿಚೆಲ್ ಸ್ಯಾಂಟನರ್, ಲಾಕಿ ಫರ್ಗ್ಯುಸನ್.

ಪಂದ್ಯ ಆರಂಭ: ಬೆಳಿಗ್ಗೆ 7

ನೇರಪ್ರಸಾರ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.