ಮೆಲ್ಬರ್ನ್: ಸೀಮಿತ ಓವರುಗಳ (ವೈಟ್ ಬಾಲ್) ಕ್ರಿಕೆಟ್ ಸರಣಿ ಆಡಲು ಭಾರತ ತಂಡವು, ಆಸ್ಟ್ರೇಲಿಯಾಕ್ಕೆ ತೆರಳಲು ಇನ್ನೂ ನಾಲ್ಕು ತಿಂಗಳು ಇವೆ. ಆದರೆ ಸಿಡ್ನಿಯಲ್ಲಿ ನಡೆಯುವ ಮೂರನೇ ಏಕದಿನ ಪಂದ್ಯದ ಮತ್ತು ಕೆನ್‌ಬೆರಾದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ.
ಭಾರತ ತಂಡವು, ಅಕ್ಟೋಬರ್ 19 ರಿಂದ ನವೆಂಬರ್ 8ವರೆಗಿನ ಅವಧಿಯಲ್ಲಿ ಕಾಂಗರೂ ನಾಡಿನಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಎರಡು ವಾರಗಳ ಅವಧಿಯಲ್ಲಿ 90 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
‘ಸಿಡ್ನಿಯ ಏಕದಿನ ಪಂದ್ಯಕ್ಕೆ ಮತ್ತು ಮನುಕಾ ಓವಲ್‌ನ (ಕೆನ್‌ಬೆರಾ) ಟಿ20 ಪಂದ್ಯಕ್ಕೆ ಸಾರ್ವಜನಿಕರಿಗಾಗಿ ಮೀಸಲಿಟ್ಟ ಟಿಕೆಟ್‌ಗಳೆಲ್ಲಾ ಬಿಕರಿಯಾಗಿವೆ. ಕ್ರಿಕೆಟ್ ಉತ್ಸಾಹಿಗಳು, ಅದರಲ್ಲೂ ಭಾರತೀಯ ಮೂಲದವರೆಲ್ಲಾ ಈ ಪಂದ್ಯಗಳಿಗೆ ಕಾತರದಿಂದ ಇದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಎಂಸಿಜಿಯಲ್ಲಿ ಮತ್ತು ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಟಿ20 ಪಂದ್ಯಗಳ ಟಿಕೆಟ್‌ಗಳಿಗೂ ಬೇಡಿಕೆಯಿದೆ ಎಂದೂ ಅದು ಹೇಳಿದೆ.
ಮಾರಾಟವಾದ ಟಿಕೆಟ್‌ಗಳಲ್ಲಿ ಶೇ 16ರಷ್ಟನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕ್ಲಬ್‌ಗಳು ಖರೀದಿಸಿವೆ. ಭಾರತ್ ಆರ್ಮಿ ಹೆಸರಿನ ಜನಪ್ರಿಯ ಕ್ಲಬ್ 2,400 ಟಿಕೆಟ್‌ಗಳನ್ನು ಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.