ADVERTISEMENT

ಸಿಬಿಟಿ ತಂಡಕ್ಕೆ ಟೈಗರ್‌ ಕಪ್‌

​ಪ್ರಜಾವಾಣಿ ವಾರ್ತೆ
Published 17 ಮೇ 2025, 22:33 IST
Last Updated 17 ಮೇ 2025, 22:33 IST
ಟೈಗರ್‌ ಕಪ್‌ (12 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿಯ ಗೆದ್ದ ಸಿಬಿಟಿ ತಂಡ
ಟೈಗರ್‌ ಕಪ್‌ (12 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿಯ ಗೆದ್ದ ಸಿಬಿಟಿ ತಂಡ   

ಬೆಂಗಳೂರು: ವಿಷ್ಣು ಸಾತ್ವಿಕ್ (80 ರನ್‌) ಅವರ ಅರ್ಧಶತಕದ ಬಲದಿಂದ ಸಿಬಿಟಿ ತಂಡವು ಟೈಗರ್‌ ಕಪ್‌ (12 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಸತ್ವ ಗ್ಲೋಬಲ್ ಸಿಟಿ ಮೈದಾನದಲ್ಲಿ ಶನಿವಾರ ನಡೆದ ಫೈನಲ್‌ ಪ‍ಂದ್ಯದಲ್ಲಿ ಸಿಬಿಟಿ ತಂಡವು 74 ರನ್‌ಗಳಿಂದ ಆನಂದ್ಸ್‌ ಕ್ರಿಕೆಟ್ ಕೋಚಿಂಗ್‌ ಅಕಾಡೆಮಿ ತಂಡವನ್ನು ಮಣಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಸಿಬಿಟಿ ತಂಡವು 30 ಓವರ್‌ಗಳಲ್ಲಿ 4 ವಿಕೆಟ್‌ಗೆ 176 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಆನಂದ್ಸ್‌ ತಂಡವು 28.2 ಓವರ್‌ಗಳಲ್ಲಿ 102 ರನ್‌ಗೆ ಹೋರಾಟ ಮುಗಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಸಿಬಿಟಿ: 30 ಓವರ್‌ಗಳಲ್ಲಿ 4 ವಿಕೆಟ್‌ಗೆ 176 (ವಿಷ್ಣು ಸಾತ್ವಿಕ್‌ 80, ಎಸ್‌.ಮೋಹಿತ್ 44, ಆರವ್‌ 24). ಆನಂದ್ಸ್‌ ಕ್ರಿಕೆಟ್‌ ಕೋಚಿಂಗ್ ಆಕಾಡೆಮಿ: 28.2 ಓವರ್‌ಗಳಲ್ಲಿ 102 (ಜೀವ ಗೌಡರ್ 24; ಸಿದ್ಧಾಂತ್‌ 7ಕ್ಕೆ 2, ಪಾರ್ಥ ಬಿ.ಎನ್‌. 8ಕ್ಕೆ 2, ವಿಷ್ಣು ಸಾತ್ವಿಕ್‌ 20ಕ್ಕೆ 2). ಪಂದ್ಯದ ಆಟಗಾರ: ವಿಷ್ಣು ಸಾತ್ವಿಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.