ADVERTISEMENT

ಎಂ.ಎಸ್. ಧೋನಿ ಖಾತೆಯಿಂದ ‘ಬ್ಲೂ ಟಿಕ್’ ತೆಗೆದ ಟ್ವಿಟರ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 11:21 IST
Last Updated 6 ಆಗಸ್ಟ್ 2021, 11:21 IST
ಎಂ.ಎಸ್. ಧೋನಿ ಟ್ವಿಟರ್ ಖಾತೆಯ ಸ್ಕ್ರೀನ್ ಶಾಟ್
ಎಂ.ಎಸ್. ಧೋನಿ ಟ್ವಿಟರ್ ಖಾತೆಯ ಸ್ಕ್ರೀನ್ ಶಾಟ್   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಖಾತೆಯ ವೆರಿಫೈಯ್ಡ್ ಬ್ಯಾಡ್ಜ್ ಅಥವಾ 'ಬ್ಲೂ ಟಿಕ್' ಅನ್ನು ಟ್ವಿಟರ್ ಕಂಪನಿ ತೆಗೆದು ಹಾಕಿದೆ.

ಈ ವರ್ಷ ಜನವರಿ 8 ರಂದು ಧೋನಿ ಕೊನೆಯ ಬಾರಿಗೆ ಟ್ವೀಟ್ ಮಾಡಿದ್ದಾರೆ. ಹಾಗಾಗಿ, ಟ್ವೀಟರ್ ಕಂಪನಿ ಬ್ಲೂ ಟಿಕ್ ತೆಗೆದುಹಾಕಿದೆ.

ಜೂನ್‌ನಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಆರೆಸ್ಸೆಸ್‌ನ ಮೋಹನ್ ಭಾಗವತ್ ಅವರ ಖಾತೆಗಳಿಂದ ಬ್ಲೂ ಟಿಕ್ ತೆಗೆದುಹಾಕಲಾಗಿತ್ತು.

ADVERTISEMENT

ಟ್ವಿಟರ್ ನಿಯಮಗಳ ಪ್ರಕಾರ, ಆರು ತಿಂಗಳ ಕಾಲ ಯಾವುದೇ ಖಾತೆ ನಿಷ್ಕ್ರಿಯವಾಗಿದ್ದರೆ ಆ ಖಾತೆಯಿಂದ 'ನೀಲಿ ಟಿಕ್' ಅನ್ನು ತೆಗೆದುಹಾಕಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.