ADVERTISEMENT

IND vs NZ: ಮೂರನೇ ಏಕದಿನ ಪಂದ್ಯ– ಭಾರತ 219ಕ್ಕೆ ಆಲೌಟ್ 

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 6:09 IST
Last Updated 30 ನವೆಂಬರ್ 2022, 6:09 IST
   

ಕ್ರೈಸ್ಟ್‌ಚರ್ಚ್: ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 219 ರನ್‌ಗಳಿಗೆ ಆಲೌಟ್ ಆಗಿದೆ.

ಟಾಸ್ ಸೋತು ಬ್ಯಾಟಿಂಗ್ಆಹ್ವಾನ ಪಡೆದ ಭಾರತ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ನಿಧಾನಗತಿಯ ಆರಂಭ ನೀಡಿದರು. ಧವನ್ 28, ಗಿಲ್ 13ಕ್ಕೆ ಆಟ ಮುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ 49 ರನ್ ಸಿಡಿಸಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು.

ಆದರೂ ತಂಡ 200ರ ಒಳಗೆ ಕುಸಿಯುವ ಆತಂಕ ಎದುರಾಗಿತ್ತು.ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅರ್ಧಶತಕ(51) ಸಿಡಿಸುವ ಮೂಲಕ ತಂಡದ ಗೌರವಾನ್ವಿತ ಮೊತ್ತಕ್ಕೆ ನೆರವಾದರು. ಉಳಿದ ಬೇರಾವ ಬ್ಯಾಟರ್‌ಗಳಿಂದಲೂ ಗಮನಾರ್ಹ ಪ್ರದರ್ಶನ ಬರಲಿಲ್ಲ. ಅಂತಿಮವಾಗಿ 47.3 ಓವರ್‌ಗಳಲ್ಲಿ ತಂಡ 218 ರನ್‌ಗಳಿಗೆ ಆಲೌಟ್ ಆಯಿತು.

ADVERTISEMENT

ನ್ಯೂಜಿಲೆಂಡ್ ಪರ ಆಡಂ ಮಿಲ್ನೆ, ಡೆರೆಲ್ ಮಿಚೆಲ್ ತಲಾ 3 ವಿಕೆಟ್ ಉರುಳಿಸಿದರು. ಟಿಮ್ ಸೌಥಿ 2 ವಿಕೆಟ್ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.