ಟಿಲ್ಲಿ ಕಾರ್ಟೀನ್ ಕೋಲ್ಮನ್ –ಎಕ್ಸ್ ಚಿತ್ರ
ಕುಚಿಂಗ್, ಮಲೇಷ್ಯಾ: ಟಿಲ್ಲಿ ಕಾರ್ಟೀನ್ ಕೋಲ್ಮನ್ (8ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡವು 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ, ಸೆಮಿಫೈನಲ್‌ಗೆ ಸ್ಥಾನ ಖಚಿತಪಡಿಸಿಕೊಂಡಿತು.
ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡಕ್ಕೆ ಕೇಟ್ ಇರ್ವಿನ್ (35) ಮತ್ತು ಎಮ್ಮಾ ಮೆಕ್ಲಿಯೋಡ್ (18) ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 49 ರನ್ ಸೇರಿಸಿದ್ದರು. ನಂತರ ಕೋಲ್ಮನ್ ಮತ್ತು ಪ್ರಿಶಾ ಥಾನವಾಲಾ (19ಕ್ಕೆ 3) ಅವರ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್, ನಾಟಕೀಯ ಕುಸಿತ ಕಂಡಿತು. ಹೀಗಾಗಿ ತಂಡವು 20 ಓವರ್‌ಗಳಲ್ಲಿ 89 ರನ್ ಗಳಿಸಷ್ಟೇ ಶಕ್ತವಾಯಿತು.
ಇಂಗ್ಲೆಂಡ್ ತಂಡವು 11.4 ಓವರ್‌ಗಳಲ್ಲಿ 4 ವಿಕೆಟ್‌ಗೆ 90 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕ ಆಟಗಾರ್ತಿಯರಾದ ಜೆಮಿಮಾ ಸ್ಪೆನ್ಸ್ ಮತ್ತು ಡೇವಿನಾ ಪೆರಿನ್ ಕ್ರಮವಾಗಿ 29 ಮತ್ತು 21 ರನ್ ಗಳಿಸಿದರು.
ಹಾಲಿ ಚಾಂಪಿಯನ್ ಭಾರತ ತಂಡವೂ ಸೆಮಿಫೈನಲ್‌ಗೆ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಮಂಗಳವಾರ ನಡೆಯುವ ಸೂಪರ್ ಸಿಕ್ಸ್ ಹಂತದ ಕೊನೆಯ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.
ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 89 (ಕೇರ್ ಇರ್ವಿನ್ 35, ಎಮ್ಮಾ ಮೆಕ್ಲಿಯೋಡ್ 18; ಟಿಲ್ಲಿ ಕಾರ್ಟೀನ್ ಕೋಲ್ಮನ್ 8ಕ್ಕೆ 4, ಪ್ರಿಶಾ ಥಾನವಾಲಾ 19ಕ್ಕೆ 3). ಇಂಗ್ಲೆಂಡ್: 11.4 ಓವರ್‌ಗಳಲ್ಲಿ 4 ವಿಕೆಟ್‌ಗೆ 90 (ಜೆಮಿಮಾ ಸ್ಪೆನ್ಸ್ 29, ಡೇವಿನಾ ಪೆರಿನ್ 21, ರಿಷಿಕಾ ಜೈಸ್ವಾಲ್ 22ಕ್ಕೆ 2). ಫಲಿತಾಂಶ: ಇಂಗ್ಲೆಂಡ್‌ಗೆ ಆರು ವಿಕೆಟ್ ಜಯ. ಪಂದ್ಯದ ಆಟಗಾರ್ತಿ: ಟಿಲ್ಲಿ ಕಾರ್ಟೀನ್ ಕೋಲ್ಮನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.