ADVERTISEMENT

23 ವರ್ಷದೊಳಗಿನವರ ಭಾರತ ಕ್ರಿಕೆಟ್ ತಂಡಕ್ಕೆ ರಾಜ್ಯದ ಶರತ್, ಶುಭಾಂಗ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 12:15 IST
Last Updated 20 ಆಗಸ್ಟ್ 2019, 12:15 IST
ಶುಭಾಂಗ್ ಹೆಗಡೆ
ಶುಭಾಂಗ್ ಹೆಗಡೆ   

ಬೆಂಗಳೂರು: ಕರ್ನಾಟಕದ ಬಿ.ಆರ್. ಶರತ್ ಮತ್ತು ಶುಭಾಂಗ್ ಹೆಗಡೆ ಅವರು 23 ವರ್ಷದೊಳಗಿನವರ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಸೆಪ್ಟೆಂಬರ್ 19 ರಿಂದ 27ರವರೆಗೆ ರಾಯಪುರದಲ್ಲಿ ಬಾಂಗ್ಲಾದೇಶ 23 ವರ್ಷದೊಳಗಿನವರ ತಂಡದ ಎದುರು ನಡೆಯುವ ಐದು ಏಕದಿನ ಪಂದ್ಯಗಳಲ್ಲಿ ಅವರು ಆಡಲಿದ್ದಾರೆ. ತಂಡವನ್ನು ಉತ್ತರಪ್ರದೇಶದ ಪ್ರಿಯಂ ಗಾರ್ಗ್ ಮುನ್ನಡೆಸಲಿದ್ದಾರೆ.

22 ವರ್ಷದ ಬೇಲೂರು ರವಿ ಶರತ್ ಅವರು ವಿಕೆಟ್‌ಕೀಪರ್ ಮತ್ತು ಬಲಗೈ ಬ್ಯಾಟ್ಸ್‌ಮನ್ ಆಗಿದ್ದಾರೆ. ಹೋದ ವರ್ಷದ ರಣಜಿ ಟೂರ್ನಿಯಲ್ಲಿ ಅವರು ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ನಾಗಪುರದಲ್ಲಿ ವಿದರ್ಭ ಎದುರು ನಡೆದಿದ್ದ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ್ದರು.

ADVERTISEMENT

ಎಡಗೈ ಸ್ಪಿನ್ನರ್ ಶುಭಾಂಗ್ ಹೆಗಡೆಗೆ ಈಗ 20 ವರ್ಷ. ಹೋದ ವರ್ಷದ ರಣಜಿ ಋತುವಿನಲ್ಲಿ ಪದಾರ್ಪಣೆ ಮಾಡಿದ್ದರು. 19 ವರ್ಷದೊಳಗಿನವರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡಿದ್ದರು.

ಭಾರತ ಜೂನಿಯರ್ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಆಶೀಶ್ ಕಪೂರ್ ಮಂಗಳವಾರ ಪ್ರಕಟಿಸಿರುವ ತಂಡ ಇಂತಿದೆ;

ಪ್ರಿಯಂ ಗಾರ್ಗ್ (ನಾಯಕ), ಯಶಸ್ವಿ ಜೈಸ್ವಾಲ್, ಮಾಧವ್ ಕೌಶಿಕ್, ಬಿ. ಆರ್. ಶರತ್ (ವಿಕೆಟ್‌ಕೀಪರ್), ಸಮರ್ಥ್ ವ್ಯಾಸ್, ಆರ್ಯನ್ ಜುಯಾಲ್ (ವಿಕೆಟ್‌ಕೀಪರ್), ಋತ್ವಿಕ್ ರಾಯ್ ಚೌಧರಿ, ಕುಮಾರ್ ಸೂರಜ್, ಅತೀಥ್ ಸೇಠ್, ಶುಭಾಂಗ್ ಹೆಗಡೆ, ಹೃತಿಕ್ ಶೋಕಿನ್, ದೃಶಾಂತ್ ಸೋನಿ, ಆರ್ಷದೀಪ್ ಸಿಂಗ್, ಕಾರ್ತಿಕ್ ತ್ಯಾಗಿ, ಹರ್‌ಪ್ರೀತ್ ಬ್ರಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.