ಹೈದರಾಬಾದ್: ಭಾರತ ತಂಡದ ಮಾಜಿ ವೇಗದ ಬೌಲರ್ ವರುಣ್ ಆ್ಯರನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 2026ನೇ ಸಾಲಿಗೆ ಬೌಲಿಂಗ್ ಕೋಚ್ ಆಗಿ ಸೋಮವಾರ ನೇಮಕ ಮಾಡಿದೆ.
ಅವರು ನ್ಯೂಜಿಲೆಂಡ್‌ನ ಎಡಗೈ ವೇಗಿ ಜೇಮ್ಸ್ ಫ್ರಾಂಕ್ಲಿನ್ ಸ್ಥಾನ ತುಂಬಲಿದ್ದಾರೆ ಎಂದು ಎಸ್‌ಆರ್‌ಎಚ್ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
35 ವರ್ಷ ವಯಸ್ಸಿನ ಆ್ಯರನ್ 2011 ರಿಂದ 2015ರ ಅವಧಿಯಲ್ಲಿ ಭಾರತ ತಂಡಕ್ಕೆ ಒಂಬತ್ತು ಟೆಸ್ಟ್ ಮತ್ತು ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.