ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿ: ಗೋವಾ, ಛತ್ತೀಸಗಡ ಜಯಭೇರಿ

ಆದಿತ್ಯ ಕೌಶಿಕ್ ಶತಕ; ಕೇರಳಕ್ಕೆ ಮೊದಲ ಜಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:45 IST
Last Updated 29 ಸೆಪ್ಟೆಂಬರ್ 2019, 19:45 IST

ಬೆಂಗಳೂರು: ಆಕರ್ಷಕ ಶತಕ ಗಳಿಸಿದ ಆದಿತ್ಯ ಕೌಶಿಕ್ ಬ್ಯಾಟಿಂಗ್ ಬಲದಿಂದ ಗೋವಾ ತಂಡವು ವಿಜಯ್ ಹಜಾರೆ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಗೆದ್ದಿತು.

ಭಾನುವಾರ ಜಸ್ಟ್‌ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕನ್ನಡಿಗ ಅಮಿತ್ ವರ್ಮಾ ನಾಯಕತ್ವದ ಗೋಪಾ ಕ್ರಿಕೆಟ್ ತಂಡವು ಮೊದಲು ಬ್ಯಾಟಿಂಗ್ ಮಾಡಿದ ಗೋವಾ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 266 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಜಾರ್ಖಂಡ್ ತಂಡವು 48.1 ಓವರ್‌ಗಳಲ್ಲಿ 224 ರನ್‌ ಗಳಿಸಿ ಸೋತಿತು. ಸುಯಶ್ ಪ್ರಭುದೇಸಾಯಿ (33ಕ್ಕೆ2) ಮತ್ತು ದರ್ಶನ್ ಮಿಸಾಲ್ (35ಕ್ಕೆ4) ಅವರು ಉತ್ತಮ ಬೌಲಿಂಗ್ ಮಾಡಿದರು. ಗೋವಾ ತಂಡವು 42 ರನ್‌ಗಳಿಂದ ಜಯಿಸಿತು.

ಛತ್ತೀಸಗಡಕ್ಕೆ ಎರಡನೇ ಜಯ: ಶನಿವಾರ ಬಲಿಷ್ಠ ಮುಂಬೈ ತಂಡದ ವಿರುದ್ಧ ಜಯಿಸಿದ್ದ ಛತ್ತೀಸಗಡ ತಂಡವು ತನ್ನ ವಿಜಯಯಾತ್ರೆಯನ್ನು ಮುಂದುವರಿಸಿತು. ಭಾನುವಾರ ಆಲೂರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಛತ್ತೀಸಗಡ ತಂಡವು 56 ರನ್‌ಗಳಿಂದ ಆಂಧ್ರದ ವಿರುದ್ಧ ಜಯಿಸಿತು.

ADVERTISEMENT

ಶಶಾಂಕ್ ಚಂದ್ರಕರ್ (54 ರನ್) ಮತ್ತು ಆಶುತೋಷ್ ಸಿಂಗ್ (75 ರನ್) ಅರ್ಧಶತಕಗಳನ್ನು ಬಾರಿಸಿ ತಂಡದ ಜಯಕ್ಕೆ ಪ್ರಮುಖ ಕಾಣಿಕೆ ನೀಡಿದರು.

ಇನ್ನೊಂದು ಪಂದ್ಯದಲ್ಲಿ ಕೇರಳ ತಂಡವು 62 ರನ್‌ಗಳಿಂದ ಹೈದರಾಬಾದ್ ವಿರುದ್ಧ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 227 ರನ್‌ ಗಳಿಸಿತು. ಅದಕ್ಕುತ್ತರವಾಗಿ ಹೈದರಾಬಾದ್ ತಂಡವು 44.4 ಓವರ್‌ಗಳಲ್ಲಿ 165 ರನ್ ಗಳಿಸಿ ಸೋತಿತು.

ಸಂಕ್ಷಿಪ್ತ ಸ್ಕೋರುಗಳು:

ಎ ಗುಂಪು (ಜಸ್ಟ್ ಕ್ರಿಕೆಟ್‌ ಮೈದಾನ, ಬೆಂಗಳೂರು): ಗೋವಾ: 50 ಓವರ್‌ಗಳಲ್ಲಿ 8ಕ್ಕೆ266 (ಆದಿತ್ಯ ಕೌಶಿಕ್ 117, ಸಿ.ಎಂ. ಗೌತಮ್ 40, ಅಮಿತ್ ವರ್ಮಾ 12, ರಾಹುಲ್ ಶುಕ್ಲಾ 33ಕ್ಕೆ6), ಜಾರ್ಖಂಡ್: 48.1 ಓವರ್‌ಗಳಲ್ಲಿ 224 (ಕುಮಾರ್ ದೇವವ್ರತ್ 20, ಸೌರಭ್ ತಿವಾರಿ 26, ಇಶಾನ್ ಕಿಶನ್ 43, ವಿರಾಟ್ ಸಿಂಗ್ 32, ಅನುಕೂಲ್ ರಾಯ್ 40, ಲಕ್ಷ್ಯ ಗರ್ಗ್ 56ಕ್ಕೆ2, ಹೇರಂಬ ಪರಬ್ 43ಕ್ಕೆ1 ಸುಯಶ್ ಪ್ರಭುದೇಸಾಯಿ 33ಕ್ಕೆ2, ದರ್ಶನ್ ಮಿಸಾಲ್ 35ಕ್ಕೆ4) ಫಲಿತಾಂಶ: ಗೋವಾ ತಂಡಕ್ಕೆ 42 ರನ್‌ಗಳ ಜಯ.

(ಆಲೂರು): ಛತ್ತೀಸಗಡ: 50 ಓವರ್‌ಗಳಲ್ಲಿ 9ಕ್ಕೆ268 (ಶಶಾಂಕ್ ಚಂದ್ರಕರ್ 54, ಆಷುತೋಷ್ ಸಿಂಗ್ 75, ಅಮನದೀಪ್ ಖರೆ 27, ಶಶಾಂಕ್ ಸಿಂಗ್ 45, ಗಿರಿನಾಥ್ ರೆಡ್ಡಿ 38ಕ್ಕೆ2, ಯರ್ರಾ ಪೃಥ್ವಿರಾಜ್ 63ಕ್ಕೆ3) , ಆಂಧ್ರ: 46.5 ಓವರ್‌ಗಳಲ್ಲಿ 212 (ಪ್ರಶಾಂತ್ ಕುಮಾರ್ 44, ಅಶ್ವಿನ್ ಹೆಬ್ಬಾರ್ 22, ರಿಕಿ ಭುಯ್ 23, ಕರಣ್ ಶಿಂಧೆ 21, ಕೆ.ವಿ. ಶಶಿಕಾಂತ್ 35, ಪುನೀತ್ ದಾತೆ 40ಕ್ಕೆ2, ಶಶಾಂಕ್ ಸಿಂಗ್ 37ಕ್ಕೆ3, ಅಜಯ್ ಜಾಧವ್ ಮಂಡಲ್ 34ಕ್ಕೆ2) ಫಲಿತಾಂಶ: ಛತ್ತೀಸಗಡ ತಂಡಕ್ಕೆ 56 ರನ್‌ಗಳ ಜಯ.

(ಆಲೂರು): ಕೇರಳ: 50 ಓವರ್‌ಗಳಲ್ಲಿ 9ಕ್ಕೆ227 (ವಿಷ್ಣು ವಿನೋದ್ 29, ರಾಬಿನ್ ಉತ್ತಪ್ಪ 33, ಸಂಜು ಸ್ಯಾಮ್ಸನ್ 36, ಸಚಿನ್ ಬೇಬಿ 32, ಪೊನ್ನಂ ರಾಹುಲ್ 35, ಅಕ್ಷಯ್ ಚಂದ್ರನ್ 28, ಅಜಯ್‌ ದೇವ್ ಗೌಡ 52ಕ್ಕೆ3, ಮೊಹಮ್ಮದ್ ಸಿರಾಜ್ 45ಕ್ಕೆ2, ಮೆಹದಿ ಹಸನ್ 38ಕ್ಕೆ2), ಹೈದರಾಬಾದ್: 44.4 ಓವರ್‌ಗಳಲ್ಲಿ 165 (ತನ್ಮಯ್ ಅಗರವಾಲ್ 69, ಜಮಾಲಪುರ ಮಲ್ಲಿಕಾರ್ಜುನ 24, ಚಾಮಾ ವಿ ಮಿಲಿಂದ್ 20, ಸಂದೀಪ್ ವಾರಿಯರ್ 14ಕ್ಕೆ2, ಆಸೀಫ್ 34ಕ್ಕೆ4, ಬಾಸಿಲ್ ಥಂಪಿ 32ಕ್ಕೆ2, ಅಕ್ಷಯ್ ಚಂದ್ರನ್ 40ಕ್ಕೆ2) ಕೇರಳಕ್ಕೆ 62 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.