ಮುಂಬೈ:ಭಾರತ ಕ್ರಿಕೆಟ್ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಕನ್ನಡದಕರಾವಳಿ ನೀರ್ ದೋಸೆ ರುಚಿಗೆ ಮನಸೋತಿದ್ದಾರೆ.
ಈ ವಿಷಯದ ಕುರಿತು ವಿರಾಟ್ ಟ್ವೀಟ್ ಮಾಡಿದ್ದಾರೆ.
‘ಬಹಳ ದಿನದ ನಂತರ ನೀರ್ ದೋಸೆ ಸವಿದೆ. ನಮ್ಮ ಮನೆಯಿಂದ500 ಮೀಟರ್ ದೂರದಲ್ಲಿ ಇರುವ ಶ್ರೇಯಸ್ ಅಯ್ಯರ್ ತಮ್ಮ ಮನೆಯಲ್ಲಿ ಮಾಡಿದ್ದ ನೀರ್ ದೋಸೆ ತಂದುಕೊಟ್ಟಿದ್ದರು. ಶ್ರೇಯಸ್ ಮತ್ತು ಅವರ ತಾಯಿಗೆ ಧನ್ಯವಾದಗಳು. ಅದಕ್ಕೆ ಪ್ರತಿಯಾಗಿ ನಾವು ಅವರಿಗೆ ಕಳಿಸಿದ ಮಷ್ರೂಮ್ ಬಿರಿಯಾನಿ ರುಚಿ ಇಷ್ಟವಾಯಿತು ಎಂದುಕೊಂಡಿರುವೆ’ ಎಂದುವಿರಾಟ್ ಟ್ವೀಟ್ ಮಾಡಿದ್ದಾರೆ.
ಭಾರತ ತಂಡದ ಆಟಗಾರ ಶ್ರೇಯಸ್ ಅವರ ತಾಯಿ ಮಂಗಳೂರು ಮೂಲದವರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರೂ ಆಗಿರುವ ವಿರಾಟ್,ಬೆಂಗಳೂರಿನಲ್ಲಿದ್ದಾಗ ನೀರ್ ದೋಸೆ ಚಟ್ನಿಯನ್ನು ತರಿಸಿಕೊಂಡು ತಿನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.