ADVERTISEMENT

ಟಿ–10 ಕ್ರಿಕೆಟ್‌ನಲ್ಲಿ ವೀರೇಂದ್ರ ಸೆಹ್ವಾಗ್ ಆಟ

ಪಿಟಿಐ
Published 3 ಅಕ್ಟೋಬರ್ 2018, 17:59 IST
Last Updated 3 ಅಕ್ಟೋಬರ್ 2018, 17:59 IST
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್   

ದುಬೈ: ಮುಂದಿನ ತಿಂಗಳು ನಡೆಯಲಿರುವ ವಿಶ್ವದ ಮೊಟ್ಟಮೊದಲ ಟೆನ್‌–10 ಕ್ರಿಕೆಟ್ ಲೀಗ್‌ನಲ್ಲಿ ಭಾರತದ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆಡಲಿದ್ದಾರೆ.

ನವೆಂಬರ್ 23ರಿಂದ ಆರಂಭ ವಾಗುವ ಟೂರ್ನಿಯಲ್ಲಿ ಸೆಹ್ವಾಗ್ ಅವ ರಲ್ಲದೇ ಪಾಕಿಸ್ತಾನದ ಶಾಹಿದ್ ಆಫ್ರಿದಿ, ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ ಅವರೂ ಆಡುವರು. ಐಸಿಸಿ ಮತ್ತು ಇಸಿಬಿ ಈ ಟೂರ್ನಿಗೆ ಮಾನ್ಯತೆ ನೀಡಿವೆ.

ಈ ಟೂರ್ನಿಯು ಹತ್ತು ದಿನಗಳ ಕಾಲ ನಡೆಯಲಿದ್ದು, 29 ಪಂದ್ಯಗಳು ಜರುಗಲಿವೆ. ಎಂಟು ತಂಡಗಳಾದ; ಕೇರಳ ಕಿಂಗ್ಸ್‌, ಪಂಜಾಬ್ ಲೆಜೆಂಡ್ಸ್‌, ಮರಾಠಾ ಅರೇಬಿಯನ್ಸ್‌, ಬೆಂಗಾಲ್ ಟೈಗರ್ಸ್, ದ ಕರಾಚಿಯನ್ಸ್‌, ರಜ ಪೂತ್ಸ್‌, ನಾರ್ಧನ್ ವಾರಿಯರ್ಸ್‌ ಮತ್ತು ಪಕ್ತೂನ್ಸ್‌ ಆಡಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.