ನಾಗ್ಪುರ: ಹಾಲಿ ಚಾಂಪಿಯನ್ ವಿದರ್ಭ ತಂಡವು ರಣಜಿ ಟ್ರೋಫಿ ಟೂರ್ನಿಯ ನಾಗಾಲ್ಯಾಂಡ್ ವಿರುದ್ಧದ ಪಂದ್ಯಕ್ಕೆ 17 ಆಟಗಾರರ ತಂಡವನ್ನು ಸೋಮವಾರ ಪ್ರಕಟಿಸಿದ್ದು, ಕರ್ನಾಟಕದ ರವಿಕುಮಾರ್ ಸಮರ್ಥ್ ಸ್ಥಾನ ಪಡೆದಿದ್ದಾರೆ.
ಇದೇ 15ರಿಂದ ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ವಿದರ್ಭ ತಂಡವು ರಣಜಿ ಟ್ರೋಫಿ ಅಭಿಯಾನವನ್ನು ಆರಂಭಿಸಲಿದೆ. ತಂಡವನ್ನು ಅಕ್ಷಯ್ ವಾಡ್ಕರ್ ಮುನ್ನಡೆಸಲಿದ್ದಾರೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ವಿದರ್ಭ ತಂಡವು ಕೇರಳ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದಿತ್ತು.
ಎಲೀಟ್ ಎ ಗುಂಪಿನಲ್ಲಿ ವಿದರ್ಭ ಸೇರಿದಂತೆ ಉತ್ತರ ಪ್ರದೇಶ, ಆಂಧ್ರ, ತಮಿಳುನಾಡು, ಜಾರ್ಖಂಡ್, ಒಡಿಶಾ, ಬರೋಡಾ ಮತ್ತು ನಾಗಾಲ್ಯಾಂಡ್ ತಂಡಗಳಿವೆ.
ಅನುಭವಿ ಕರುಣ್ ನಾಯರ್ ಅವರ ಬದಲಿಗೆ ಕರ್ನಾಟಕದ ಮತ್ತೊಬ್ಬ ಬ್ಯಾಟರ್ ಸಮರ್ಥ್ ಅವರನ್ನು ಆಯ್ಕೆ ಮಾಡಲಾಗಿದೆ. ಉಸ್ಮಾನ್ ಘನಿ ತಂಡಕ್ಕೆ ಕೋಚ್ ಆಗಿ ಮುಂದುವರಿಯಲಿದ್ದು, ಧರ್ಮೇಂದರ್ ಅಹ್ಲಾವತ್ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ತಂಡ ಹೀಗಿದೆ: ಅಕ್ಷರ್ ವಾಡ್ಕರ್ (ನಾಯಕ, ವಿಕೆಟ್ ಕೀಪರ್), ಅಥರ್ವ ತೈಡೆ, ಅಮನ್ ಮೊಖಡೆ, ಡ್ಯಾನಿಶ್ ಮಾಲೆವಾರ್, ಯಶ್ ರಾಥೋಡ್ (ವಿಕೆಟ್ ಕೀಪರ್), ಹರ್ಷ್ ದುಬೆ, ಪಾರ್ಥ್ ರೇಖಾಡೆ, ಯಶ್ ಠಾಕೂರ್, ನಚಿಕೇತ್ ಭೂತೆ, ದರ್ಶನ್ ನಲ್ಕಂಡೆ, ಆದಿತ್ಯ ಠಾಕ್ರೆ, ಯಶ್ ಕದಂ, ಶಿವಂ ದೇಶಮುಖ್ (ವಿಕೆಟ್ ಕೀಪರ್), ಪ್ರಫುಲ್ ಹಿಂಗೆ, ಅಕ್ಷಯ್ ಕರ್ನೇವರ್, ಧ್ರುವ ಶೋರೆ, ಆರ್. ಸಮರ್ಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.