ADVERTISEMENT

ಟೆಸ್ಟ್‌ ಕ್ರಿಕೆಟ್‌ನಿಂದ ವಾರ್ನರ್‌ ಜನವರಿಯಲ್ಲಿ ನಿವೃತ್ತಿ?

ಪಿಟಿಐ
Published 3 ಜೂನ್ 2023, 14:42 IST
Last Updated 3 ಜೂನ್ 2023, 14:42 IST
ಡೇವಿಡ್‌ ವಾರ್ನರ್‌ (ಪಿಟಿಐ ಚಿತ್ರ)
ಡೇವಿಡ್‌ ವಾರ್ನರ್‌ (ಪಿಟಿಐ ಚಿತ್ರ)   

undefined

ಬೆಕೆನ್‌ಹ್ಯಾಮ್: ಆಸ್ಟ್ರೇಲಿಯಾದ ಸ್ಫೋಟಕ ಶೈಲಿಯ ಬ್ಯಾಟರ್  ಡೇವಿಡ್‌ ವಾರ್ನರ್‌ ಟೆಸ್ಟ್‌ ಕ್ರಿಕೆಟ್‌ನಿಂದ  2024ರ ಜನವರಿಯಲ್ಲಿ ನಡೆಯುವ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ ಸರಣಿ ಸಂದರ್ಭದಲ್ಲಿ ನಿವೃತ್ತಿ ಘೋಷಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಮುಂದಿನ ವಾರ ನಡೆಯಲಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯಕ್ಕೆ ಸಜ್ಜಾಗುತ್ತಿರುವ 36 ವರ್ಷದ ವಾರ್ನರ್‌, ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

ADVERTISEMENT

‘ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಆ್ಯಶಸ್‌ ಸರಣಿಯಲ್ಲಿ ಉತ್ತಮ ರನ್‌ ಗಳಿಸಲು ಸಾಧ್ಯವಾದರೆ, ಮುಂದಿನ ವರ್ಷ ಜನವರಿ 3ರಂದು ನಡೆಯುವ ಪಾಕಿಸ್ತಾನದ ವಿರುದ್ಧ ಪಂದ್ಯದ ಮೂಲಕ ನಿವೃತ್ತಿ ಪಡೆಯಲಿದ್ದೇನೆ’ ಎಂದಿದ್ದಾರೆ.

ಸೀಮಿತ ಓವರ್‌ಗಳಲ್ಲಿ ಮುಂದುವರಿಯಲು ಬಯಸಿರುವ ವಾರ್ನರ್‌ ಮುಂದಿನ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಬಯಕೆ ಹೊಂದಿದ್ದಾರೆ. ಇದೇ ವೇಳೆ ತಮ್ಮ ಕುಟುಂಬದ ಸಹಕಾರವನ್ನು ಸ್ಮರಿಸಿಕೊಂಡಿದ್ದಾರೆ.

ವಾರ್ನರ್‌ ಇತ್ತೀಚಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಫಾರ್ಮ್‌ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಬಾರ್ಡರ್‌– ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ವಾರ್ನರ್‌ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 26 ರನ್‌ ಗಳಿಸಿದ್ದರು. ಜೂನ್‌ 7ರಿಂದ 11ರ ವರೆಗೆ ನಡೆಯುವ ವಿಶ್ವ ಚಾಂಪಿಯನ್‌ ಟೆಸ್ಟ್‌ ಟೂರ್ನಿ ಮತ್ತು ಇಂಗ್ಲೆಂಡ್‌ ವಿರುದ್ಧದ ಆ್ಯಶಸ್‌ ಸರಣಿಯ ಐದು ಪಂದ್ಯಗಳ ಪೈಕಿ ಮೊದಲ ಎರಡು ಪಂದ್ಯದಲ್ಲಿ ವಾರ್ನರ್‌ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.