ADVERTISEMENT

AUS vs WI| ವಿಂಡೀಸ್‌ಗೆ ಸೋಲು ತಪ್ಪಿಸುವರೇ ಬ್ರಾಥ್‌ವೇಟ್?

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 18:33 IST
Last Updated 3 ಡಿಸೆಂಬರ್ 2022, 18:33 IST
ಕ್ರೇಗ್ ಬ್ರಾಥ್‌ವೇಟ್
ಕ್ರೇಗ್ ಬ್ರಾಥ್‌ವೇಟ್   

ಪರ್ತ್ (ಎಎಫ್‌ಪಿ): ಕ್ರೇಗ್ ಬ್ರಾಥ್‌ವೇಟ್ (ಬ್ಯಾಟಿಂಗ್ 101) ವೆಸ್ಟ್ ಇಂಡೀಸ್ ತಂಡವನ್ನು ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರು ಮಾಡುವ ಭರವಸೆ ಮೂಡಿಸಿದ್ದಾರೆ.

499 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿರುವ ವಿಂಡೀಸ್ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 62 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 192 ರನ್ ಗಳಿಸಿದೆ. ಆರಂಭಿಕ ಬ್ಯಾಟರ್‌ ಕ್ರೇಗ್ ಮತ್ತು ಕೈಲ್ ಮೇಯರ್ಸ್‌ ಕ್ರೀಸ್‌ನಲ್ಲಿದ್ದಾರೆ.

ವಿಂಡೀಸ್ ತಂಡಕ್ಕೆ ಗೆಲುವು ಸಾಧಿಸಲು ಕೊನೆಯ ದಿನವಾದ ಭಾನುವಾರ 306 ರನ್ ಗಳಿಸುವ ಅಗತ್ಯವಿದೆ. ಇಲ್ಲವೇ ರಕ್ಷಣಾತ್ಮಕವಾಗಿ ಆಡಿ ಡ್ರಾ ಮಾಡಿಕೊಳ್ಳುವ ಅವಕಾಶವಿದೆ.

ADVERTISEMENT

ಆದರೆ ಕೊನೆಯ ದಿನದ ಪಿಚ್‌ನಲ್ಲಿ ವಿಂಡೀಸ್ ತಂಡದ ಏಳು ವಿಕೆಟ್‌ಗಳನ್ನು ಗಳಿಸಿ ಗೆಲುವಿನ ಸಂಭ್ರಮ ಆಚರಿಸುವ ಛಲದಲ್ಲಿ ಆತಿಥೇಯರಿದ್ದಾರೆ.

ಲಾಬುಷೇನ್ ದಾಖಲೆ: ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲಾಬುಷೇನ್ (104; 110ಎ, 4X13, 6X2) ಶತಕ ಬಾರಿಸಿದರು. ಅವರು ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಗಳಿಸಿದ್ದರು. ಇದು ದಾಖಲೆಯಾಗಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 152.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 598ಡಿಕ್ಲೇರ್ಡ್‌; ವೆಸ್ಟ್ ಇಂಡೀಸ್: 98.2 ಓವರ್‌ಗಳಲ್ಲಿ 283. ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 37 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 182 ಡಿಕ್ಲೇರ್ಡ್ (ಡೇವಿಡ್ ವಾರ್ನರ್ 48, ಮಾರ್ನಸ್ ಲಾಬುಷೇನ್ ಔಟಾಗದೆ 104), ವೆಸ್ಟ್ ಇಂಡೀಸ್: 62 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 192 (ಕ್ರೇಗ್ ಬ್ರಾಥ್‌ವೇಟ್ ಬ್ಯಾಟಿಂಗ್ 101, ತೇಜನಾರಾಯಣ ಚಂದ್ರಪಾಲ್ 45, ಜರ್ಮೈನ್‌ ಬ್ಲ್ಯಾಕ್‌ವುಡ್ 24, ನೇಥನ್ ಲಯನ್ 54ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.