ADVERTISEMENT

ವಿಂಡೀಸ್‌ ತಂಡಕ್ಕೆ ಬ್ರಾಥ್‌ವೇಟ್‌ ನಾಯಕ

ರಾಯಿಟರ್ಸ್
Published 5 ಫೆಬ್ರುವರಿ 2019, 15:48 IST
Last Updated 5 ಫೆಬ್ರುವರಿ 2019, 15:48 IST
ಕ್ರೆಗ್‌ ಬ್ರಾಥ್‌ವೇಟ್‌
ಕ್ರೆಗ್‌ ಬ್ರಾಥ್‌ವೇಟ್‌   

ಸೇಂಟ್‌ ಲೂಸಿಯಾ: ಆರಂಭಿಕ ಬ್ಯಾಟ್ಸ್‌ಮನ್‌ ಕ್ರೆಗ್‌ ಬ್ರಾಥ್‌ವೇಟ್‌, ಇಂಗ್ಲೆಂಡ್‌ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

‘ನಿಧಾನಗತಿಯ ಬೌಲಿಂಗ್‌ನ ಕಾರಣದಿಂದಾಗಿ ಜೇಸನ್‌ ಹೋಲ್ಡರ್‌ ಮೇಲೆ ಐಸಿಸಿ ಒಂದು ಪಂದ್ಯ ನಿಷೇಧ ಹೇರಿದೆ. ಹೀಗಾಗಿ ಬ್ರಾಥ್‌ವೇಟ್‌ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ’ ಎಂದು ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ತಿಳಿಸಿದೆ.

ಹೋದ ವರ್ಷದ ನವೆಂಬರ್‌ನಲ್ಲಿ ನಡೆದಿದ್ದ ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ ಬ್ರಾಥ್‌ವೇಟ್‌ ಅವರು ವಿಂಡೀಸ್‌ ತಂಡವನ್ನು ಮುನ್ನಡೆಸಿದ್ದರು.

ADVERTISEMENT

ಮೂರನೇ ಟೆಸ್ಟ್‌, ಸೇಂಟ್‌ ಲೂಸಿಯಾದಲ್ಲಿ ಶನಿವಾರದಿಂದ ನಡೆಯಲಿದೆ. ಈ ಪಂದ್ಯಕ್ಕೆ ಕ್ರಿಕೆಟ್‌ ವೆಸ್ಟ್‌ ಇಂಡೀಸ್‌, 14 ಸದಸ್ಯರ ತಂಡವನ್ನು ಪ್ರಕಟಿಸಿದೆ. ವೇಗದ ಬೌಲರ್‌ ಕೀಮೊ ಪಾಲ್‌ ಮತ್ತು ಅಲಜಾರಿ ಜೋಸೆಫ್‌ ಅವರಿಗೆ ಅವಕಾಶ ನೀಡಲಾಗಿದೆ.

ತಂಡ ಇಂತಿದೆ: ಕ್ರೆಗ್‌ ಬ್ರಾಥ್‌ವೇಟ್‌ (ನಾಯಕ), ಡರೆನ್‌ ಬ್ರಾವೊ, ಶಮರಾಹ್‌ ಬ್ರೂಕ್ಸ್‌, ಜಾನ್‌ ಕ್ಯಾಂಪ್‌ಬೆಲ್‌, ರಾಸ್ಟನ್‌ ಚೇಸ್‌, ಶೇನ್‌ ಡೌರಿಚ್‌, ಶಾನನ್‌ ಗೇಬ್ರಿಯಲ್‌, ಶಿಮ್ರನ್‌ ಹೆಟ್ಮೆಯರ್‌, ಶಾಯ್‌ ಹೋಪ್‌, ಅಲಜಾರಿ ಜೋಸೆಫ್‌, ಕೀಮೊ ಪಾಲ್‌, ಕೆಮರ್‌ ರೋಚ್‌, ಒಶಾನೆ ಥಾಮಸ್‌ ಮತ್ತು ಜೋಮೆಲ್‌ ವಾರಿಕನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.