ADVERTISEMENT

ರಿಷಭ್ ಪಂತ್ ಸಂತಸದ ಗುಟ್ಟು ಇಶಾ!

ಇನ್ಸ್ಟಾಗ್ರಾಮ್‌ನಲ್ಲಿ ಚಿತ್ರ ಹಂಚಿಕೊಂಡ ಕ್ರಿಕೆಟಿಗ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 5:26 IST
Last Updated 18 ಜನವರಿ 2019, 5:26 IST
ರಿಷಭ್ ಪಂತ್ ಮತ್ತು ಇಶಾ ನೇಗಿ –ಇನ್ಸ್‌ಟಾಗ್ರಾಮ್ ಚಿತ್ರ
ರಿಷಭ್ ಪಂತ್ ಮತ್ತು ಇಶಾ ನೇಗಿ –ಇನ್ಸ್‌ಟಾಗ್ರಾಮ್ ಚಿತ್ರ   

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಈಚೆಗೆ ತಮ್ಮ ಶತಕ ಮತ್ತು ಬೇಬಿಸಿಟ್ಟರ್ ಸ್ವಾರಸ್ಯದ ಮೂಲಕ ಕ್ರಿಕೆಟ್‌ಪ್ರಿಯರ ಮನಗಳನ್ನು ಗೆದ್ದಿದ್ದ ಭಾರತದ ಕ್ರಿಕೆಟ್ ರಿಷಭ್ ಪಂತ್ ಮನ ಕದ್ದಬೆಡಗಿ ಯಾರು ಗೊತ್ತೇ?

ದೆಹಲಿಯಲ್ಲಿ ಇಂಟಿರಿಯರ್ ಡಿಸೈನರ್‌ ಆಗಿರುವ ಇಶಾ ನೇಗಿಯೇ ಆ ಹುಡುಗಿ. ಸ್ವತಃ ರಿಷಭ್ ಅವರೇ ತಾವು ಇಶಾ ಜೊತೆಗೆ ಇರುವ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

‘ನನ್ನ ಜೀವನದ ಸಂತಸ ಹೆಚ್ಚಲು ಕಾರಣವಾಗಿರುವ ನಿನ್ನ ಸಂತಸಕ್ಕಾಗಿ ಇದು’ ಎಂದು ರಿಷಭ್ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಶಾ, ‘ನನ್ನ ಆಪ್ತ ಸ್ನೇಹಿತ, ಹೃದಯದ ಗೆಳೆಯ ಮತ್ತು ನನ್ನ ಜೀವನದ ಪ್ರೀತಿ ನೀನು’ ಎಂದಿದ್ದಾರೆ.

ADVERTISEMENT

ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದ ಭಾರತದ ಮೊದಲ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ರಿಷಭ್ ಅವರದ್ದು, ದೆಹಲಿಯ ಆಟಗಾರ ರಿಷಭ್ ಅವರು, ಆಸ್ಟ್ರೇಲಿಯಾ ಸರಣಿಯಲ್ಲಿ ಏಳು ಇನಿಂಗ್ಸ್‌ಗಳಿಂದ 350 ರನ್‌ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.