ADVERTISEMENT

ಕ್ರಿಕೆಟ್‌: ವಿಂಡೀಸ್‌ಗೆ ವಿಜಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 15:41 IST
Last Updated 10 ಜನವರಿ 2020, 15:41 IST
ಅಲ್ಜಾರಿ ಜೋಸೆಫ್‌
ಅಲ್ಜಾರಿ ಜೋಸೆಫ್‌   

ಬ್ರಿಡ್ಜ್‌ಟೌನ್‌: ಅಲ್ಜಾರಿ ಜೋಸೆಫ್‌ (32ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ಮತ್ತು ನಿಕೋಲಸ್‌ ಪೂರನ್‌ (52; 44ಎ, 6ಬೌಂ) ಅರ್ಧಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಐರ್ಲೆಂಡ್‌ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್‌ನಿಂದ ಗೆದ್ದಿದೆ.

ಕೆನ್ಸಿಂಗ್‌ಟನ್‌ ಓವಲ್‌ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದ ಅಂತಿಮ ಓವರ್‌ನಲ್ಲಿ ವಿಂಡೀಸ್‌ ಗೆಲುವಿಗೆ ಐದು ರನ್‌ಗಳು ಬೇಕಿದ್ದವು. ಮಾರ್ಕ್‌ ಅಡೇರ್‌ ಅವರು ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ ಮೂರು ರನ್‌ಗಳನ್ನು ಬಿಟ್ಟುಕೊಟ್ಟರು. ಹೀಗಾಗಿ ಕುತೂಹಲ ಹೆಚ್ಚಿತ್ತು. ಐದನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಶೆಲ್ಡನ್‌ ಕಾಟ್ರೆಲ್‌, ವಿಂಡೀಸ್‌ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌; 50 ಓವರ್‌ಗಳಲ್ಲಿ 9 ವಿಕೆಟ್‌ಗೆ 237 (ಪಾಲ್‌ ಸ್ಟರ್ಲಿಂಗ್‌ 63, ವಿಲಿಯಂ ಪೋರ್ಟರ್‌ಫೀಲ್ಡ್‌ 29, ಕೆವಿನ್‌ ಓಬ್ರಿಯನ್‌ 31, ಸಿಮಿ ಸಿಂಗ್‌ 34; ಶೆಲ್ಡನ್‌ ಕಾಟ್ರೆಲ್‌ 51ಕ್ಕೆ3, ಖಾರಿ ಪಿಯೆರ್‌ 50ಕ್ಕೆ1, ಅಲ್ಜಾರಿ ಜೋಸೆಫ್‌ 32ಕ್ಕೆ4).

ADVERTISEMENT

ವೆಸ್ಟ್‌ ಇಂಡೀಸ್‌: 49.5 ಓವರ್‌ಗಳಲ್ಲಿ 9 ವಿಕೆಟ್‌ಗೆ 242 (ಶಾಯ್‌ ಹೋಪ್‌ 25, ನಿಕೋಲಸ್‌ ಪೂರನ್‌ 52, ಕೀರನ್‌ ಪೊಲಾರ್ಡ್‌ 40, ಹೇಡನ್‌ ವಾಲ್ಶ್‌ ಔಟಾಗದೆ 46, ಅಲ್ಜಾರಿ ಜೋಸೆಫ್‌ 16; ಆ್ಯಂಡಿ ಮೆಕ್‌ಬ್ರೈನ್‌ 37ಕ್ಕೆ2, ಬಾರಿ ಮೆಕ್‌ಕಾರ್ಟಿ 28ಕ್ಕೆ2, ಸಿಮಿ ಸಿಂಗ್ 48ಕ್ಕೆ3).

ಫಲಿತಾಂಶ: ವೆಸ್ಟ್‌ ಇಂಡೀಸ್‌ ತಂಡಕ್ಕೆ ಒಂದು ವಿಕೆಟ್‌ ಜಯ. 3 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ. ಪಂದ್ಯಶ್ರೇಷ್ಠ: ಅಲ್ಜಾರಿ ಜೋಸೆಫ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.