ADVERTISEMENT

ಹರ್ಮನ್‌ಪ್ರೀತ್ ಕೌರ್‌ಗೆ ಕಠಿಣ ಸವಾಲು

ಭಾರತ–ಇಂಗ್ಲೆಂಡ್ ಟಿ20 ಕ್ರಿಕೆಟ್ ಪಂದ್ಯ ಇಂದು

ಪಿಟಿಐ
Published 9 ಜುಲೈ 2021, 9:11 IST
Last Updated 9 ಜುಲೈ 2021, 9:11 IST
ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್   

ನಾರ್ತಾಂಪ್ಟನ್: ಹರ್ಮನ್‌ಪ್ರೀತ್ ಕೌರ್ ಮುಂದೆ ಈಗ ಎರಡು ಸವಾಲುಗಳಿವೆ. ಒಂದು ತಮ್ಮ ಬ್ಯಾಟಿಂಗ್‌ ಲಯ ಕಂಡುಕೊಳ್ಳುವುದು. ಇನ್ನೊಂದು ಶುಕ್ರವಾರದಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟಿ20 ಕ್ರಿಕೆಟ್ ಸರಣಿಯಲ್ಲಿ ಗೆಲುವಿನತ್ತ ತಂಡವನ್ನು ಮುನ್ನಡೆಸುವುದು.

ಏಕೈಕ ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಭಾರತದ ಮಹಿಳೆಯರ ತಂಡವು ಇಂಗ್ಲೆಂಡ್ ವಿರುದ್ಧ ಸೋತಿದೆ. ಆ ಎರಡೂ ಸರಣಿಗಳಲ್ಲಿ ಮಿಥಾಲಿ ರಾಜ್ ನಾಯಕತ್ವ ವಹಿಸಿದ್ದರು. ಆದರೆ, ಕೌರ್ ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದರು.

ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿಯೂ ಮಿಥಾಲಿ ಅರ್ಧಶತಕಗಳನ್ನು ದಾಖಲಿಸಿದ್ದರು. ಸರಣಿಯ ಕೊನೆಯ ಪಂದ್ಯದಲ್ಲಿ ಜಯಿಸಲು ಮಿಥಾಲಿ ಮತ್ತು ಸ್ಮೃತಿ ಮಂದಾನ ಅವರ ಅಬ್ಬರದ ಬ್ಯಾಟಿಂಗ್ ಕಾರಣವಾಗಿತ್ತು.

ADVERTISEMENT

ಆದರೆ ಚುಟುಕು ಸರಣಿಯಲ್ಲಿ ಸ್ಮೃತಿ, ಯುವ ಆಟಗಾರ್ತಿ ಶಫಾಲಿ ವರ್ಮಾ, ನಾಯಕಿ ಕೌರ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಜೆಮಿಮಾ ರಾಡ್ರಿಗಸ್ ತಮ್ಮ ಫಾರ್ಮ್‌ಗೆ ಮರಳಿದರೆ ತಂಡದ ಬಲ ಹೆಚ್ಚಲಿದೆ. ಬೌಲರ್‌ಗಳಾದ ಶಿಖಾ ಪಾಂಡೆ ಬೌಲಿಂಗ್‌, ಪೂನಂ ಯಾದವ್, ಸ್ನೇಹ ರಾಣಾ ಅವರ ಮುಂದೆ ಆತಿಥೇಯ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ.

ಭಾರತದ ಎದುರು ವಿಜಯದ ಓಟವನ್ನು ಮುಂದುವರಿಸುವ ಛಲದಲ್ಲಿ ಹೀಥರ್ ನೈಟ್ ನಾಯಕತ್ವದ ತಂಡವಿದೆ.

ತಂಡಗಳು: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹರ್ಲಿನ್ ಡಿಯೊಲ್, ಶಫಾಲಿ ವರ್ಮಾ, ಸ್ಮೃತಿ ಮಂದಾನ, ತಾನಿಯಾ ಭಾಟಿಯಾ (ವಿಕೆಟ್‌ಕೀಪರ್), ಸ್ನೇಹ್ ರಾಣಾ, ಪೂನಂ ಯಾದವ್, ರಾಧಾ ಯಾದವ್. ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ದೀಪ್ತಿ ಶರ್ಮಾ, ಶಿಖಾ ಪಾಂಡೆ, ಇಂದ್ರಾಣಿ ರಾಯ್, ಅರುಂಧತಿ ರೆಡ್ಡಿ, ಏಕ್ತಾ ಬಿಷ್ಠ್, ಸಿಮ್ರನ್ ಬಹಾದ್ದೂರ್.

ಇಂಗ್ಲೆಂಡ್: ಹೀಥರ್ ನೈಟ್ (ನಾಯಕಿ), ಕ್ಯಾಥರಿನ್ ಬ್ರಂಟ್, ಮ್ಯಾಡಿ ವಿಲಿಯರ್ಸ್, ಟ್ಯಾಮಿ ಬೆಮೌಂಟ್ (ವಿಕೆಟ್‌ಕೀಪರ್), ಫ್ರೆಯಾ ಡೆವಿಸ್, ನತಾಶಾ ಫರಾಂಟ್, ಅನ್ಯಾ ಶ್ರಬ್‌ಸೋಲ್, ಡೇನಿಯಲ್ ವೈಟ್, ಸೋಫಿಯಾ ಡಂಕ್ಲಿ, ನಥಾಲಿ ಶಿವರ್. ಸೋಫಿ ಎಕ್ಸ್‌ಲ್‌ಸ್ಟೋನ್, ಸಾರಾ ಗ್ಲೆನ್, ಎಮಿ ಎಲೆನ್ ಜೋನ್ಸ್. ಫ್ರಾನ್ ವಿಲ್ಸನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.