ADVERTISEMENT

ಕೌರ್ ಬಳಗಕ್ಕೆ ಇಂಗ್ಲೆಂಡ್ ಸವಾಲು

ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಸೆಮಿಫೈನಲ್‌

ಪಿಟಿಐ
Published 21 ನವೆಂಬರ್ 2018, 18:31 IST
Last Updated 21 ನವೆಂಬರ್ 2018, 18:31 IST
ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್   

ನಾರ್ಥ್‌ ಸೌಂಡ್, ಆ್ಯಂಟಿಗಾ: ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಈಗ ಹಳೆಯ ಸೋಲುಗಳ ನೋವು ಮರೆಯುವ ಕಾಲ ಈಗ ಬಂದಿದೆ. ವಿಶ್ವ ವಿಜಯಿಯಾಗಲು ಇನ್ನೆರಡೇ ಹೆಜ್ಜೆಗಳನ್ನು ಸಾಗುವ ತವಕದಲ್ಲಿದೆ.

ಅದರ ಮೊದಲ ಹೆಜ್ಜೆಯಾಗಿ ಶುಕ್ರವಾರ ಬೆಳಗಿನ ಜಾವ (ಭಾರತೀಯ ಕಾಲಮಾನ) ನಡೆಯಲಿರುವ ಮಹಿಳೆ ಯರ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

ಹೋದ ಸಲದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ಒಂಬತ್ತು ರನ್‌ಗಳಿಂದ ಭಾರತ ತಂಡಕ್ಕೆ ಸೋಲುಣಿಸಿತ್ತು. ಇದೀಗ ಆ ಸೇಡನ್ನು ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ತೀರಿಸಿಕೊಳ್ಳುವ ಛಲದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ ವಿದೆ.

ADVERTISEMENT

ಟೂರ್ನಿಯ ಗುಂಪು ಹಂತದಲ್ಲಿ ಕೌರ್‌ ಬಳಗವು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಬಲಾಢ್ಯ ತಂಡಗಳನ್ನು ಮಣಿಸಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್, ಅನುಭವಿ ಬ್ಯಾಟ್ಸ್‌ವುಮನ್ ಮಿಥಾಲಿ ರಾಜ್, ‘ಬಿಗ್‌ ಬ್ಯಾಷ್‌’ ಖ್ಯಾತಿಯ ಸ್ಮೃತಿ ಮಂದಾನ, ಕನ್ನಡತಿ ವೇದಾ ಕೃಷ್ಣಮೂರ್ತಿ, ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅವರೆಲ್ಲರೂ ಉತ್ತಮ ಲಯದಲ್ಲಿದ್ದಾರೆ. ಆದ್ದರಿಂದ ಬ್ಯಾಟಿಂಗ್ ವಿಭಾಗವು ಸಮರ್ಥವಾಗಿದೆ.

ಬೌಲಿಂಗ್‌ನಲ್ಲಿಯೂ ಹೆಚ್ಚಿನಚಿಂತೆ ಇಲ್ಲ. ಮಧ್ಯಮವೇಗಿ ಅರುಂಧತಿ ರೆಡ್ಡಿ, ದಯಾಳನ್ ಹೇಮಲತಾ, ಪೂನಮ್ ಯಾದವ್, ಏಕ್ತಾ ಬಿಷ್ಠ್ ಅವರು ತಂಡದ ಜಯದ ಪಾತ್ರ ವಹಿಸಬಲ್ಲ ಸಮ ರ್ಥರು. ಆದರೆ, ಇಂಗ್ಲೆಂಡ್ ತಂಡವನ್ನು ಎದುರಿಸಲು ವಿಶೇಷ ಯೋಜನೆಯ ಅಗತ್ಯವಂತೂ ಇದೆ.ಅದಕ್ಕಾಗಿ ತಂಡದ ಕೋಚ್ ರಮೇಶ್ ಪೊವಾರ್ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಲಿದೆ.

ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾ ಗವು ಚೆನ್ನಾಗಿದೆ. ಅನ್ಯಾ ಶ್ರಬ್‌ಸೋಲ್, ನತಾಲೀ ಸೀವರ್ ಅವರು ಇದುವರೆಗೆ ಉತ್ತಮವಾಗಿ ಆಡಿದ್ದಾರೆ. ಆದರೆ ಬ್ಯಾಟ್ಸ್‌ವುಮನ್‌ಗಳಾದ ಡ್ಯಾನಿ ವೈಟ್ ಮತ್ತು ಹೀಥರ್ ನೈಟ್ ಅವರು ಲಯಕ್ಕೆ ಮರಳುವ ಅಗತ್ಯವಿದೆ.

ಎಮಿ ಜೋನ್ಸ್‌ ಅವರು ಟೂರ್ನಿಯಲ್ಲಿಮೂರು ಅರ್ಧಶತಕಗಳನ್ನು ದಾಖ ಲಿಸಿದ್ದಾರೆ. ಇಂಗ್ಲೆಂಡ್ ಪರ ಅವರೇ ಅತ್ಯಧಿಕ ಸ್ಕೋರರ್ ಆಗಿದ್ದಾರೆ. ಈ ಪಂದ್ಯದಲ್ಲಿಯೂ ಅವರು ಮಿಂಚುವ ನಿರೀಕ್ಷೆ ಇದೆ.

ಆತಿ ಹೆಚ್ಚು ರನ್ ಗಳಿಸಿದವರು

ಆಟಗಾರ್ತಿ - ತಂಡ - ಪಂದ್ಯ - ರನ್ - ಬೌಂಡರಿ - ಸಿಕ್ಸರ್‌ - ಸ್ಟ್ರೈಕ್‌ರೇಟ್

ಹರ್ಮನ್‌ಪ್ರೀತ್ ಕೌರ್‌ - ಭಾರತ - 04 - 167 - 12 - 12 - 177.66

ಸೂಜಿ ಬೇಟ್ಸ್‌- ನ್ಯೂಜಿಲೆಂಡ್ - 04 - 161 - 17 - 01 - 119.26

ಅಲೀಸಾ ಹೀಲಿ - ಆಸ್ಟ್ರೇಲಿಯಾ - 03 - 157 - 25 - 02 - 160.20

ಸ್ಮೃತಿ ಮಂದಾನ - ಭಾರತ - 04 - 144 - 17 - 04 - 121.01

ಜವೇರಿಯಾ ಖಾನ್‌ - ಪಾಕಿಸ್ತಾನ - 04 - 136 - 20 - 00 - 130.77

***

ಹೆಚ್ಚು ವಿಕೆಟ್ ಗಳಿಸಿರುವ ಬೌಲರ್‌ಗಳು

ಆಟಗಾರ್ತಿ - ತಂಡ - ಪಂದ್ಯ - ಎಸೆತ - ರನ್‌ - ವಿಕೆಟ್

ದೀಂಡ್ರಾ ಡಾಟಿನ್‌ - ವಿಂಡೀಸ್‌ - 04 - 70 - 54 - 09

ಲೀ ಕ್ಯಾಸ್ಪರೇಕ್‌ - ನ್ಯೂಜಿಲೆಂಡ್ - 04 - 96 - 94 - 08

ಪೂನಮ್ ಯಾದವ್‌ - ಭಾರತ - 04 - 96 - 97 - 08

ಎನಿ ಶ್ರಬ್‌ಸೋಲ್‌ - ಇಂಗ್ಲೆಂಡ್ - 03 - 66 - 35 - 07

ಸ್ಟೇಫನಿ ಟೇಲರ್‌ - ವಿಂಡೀಸ್‌ - 04 - 70 - 62 - 07

ಪಂದ್ಯ ಆರಂಭ: ಬೆಳಿಗ್ಗೆ 5.30 (ಶುಕ್ರವಾರ)

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.